Advertisement

ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಕೋಟಿವರೆಗೆ ಮೀಸಲಾತಿ

09:38 AM Jan 22, 2018 | Team Udayavani |

ಬೆಂಗಳೂರು: ಸರ್ಕಾರದ ಗುತ್ತಿಗೆ ಕಾಮಗಾರಿ ಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ. ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಚಾಮರಾಜಪೇಟೆಯ ಜಿಂಕೆ ಪಾರ್ಕ್‌ ಬಳಿ ನಿರ್ಮಿಸಲಾಗಿರುವ “ಮಹರ್ಷಿ ವಾಲ್ಮೀಕಿ ಭವನ’ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ವರ್ಗದ ಗುತ್ತಿಗೆದಾರರಂತೆ ಎಸ್ಸಿ-ಎಸ್ಟಿ ವರ್ಗದ ಗುತ್ತಿಗೆದಾ ರರೂ ಸಹ ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸರ್ಕಾರದ 50 ಲಕ್ಷ ರೂ.ವರೆಗಿನ
ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಕಾಯ್ದೆ ತರಲಾಗಿದೆ. ಈಗ ಆ ಪ್ರಮಾಣವನ್ನು 1 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದರು.

Advertisement

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂದು ನಾನು ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ
ಸರ್ಕಾರದ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರ ರಿಗೆ ಮೀಸಲಾತಿ ಅವಕಾಶ ಕಲ್ಪಿಸಲಾಯಿತು ಎಂದರು. ಹಿಂದಿನ ಬಿಜೆಪಿ
ಸರ್ಕಾರ 5 ವರ್ಷಗಳಲ್ಲಿ 21 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರೆ, ನನ್ನ ಅವಧಿಯಲ್ಲಿ 86 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಾನು ಅಳಿಯ ಇದ್ದಂತೆ
ನಾನು ಒಂದು ರೀತಿಯಲ್ಲಿ ಚಾಮರಾಜಪೇಟೆಯ ಅಳಿಯ ಇದ್ದಂತೆ. ನನ್ನ ಮಾವನ ಊರಿನವರು ಮತ್ತು ನನ್ನ ಜಿಲ್ಲೆಯವರು ಇಲ್ಲಿ ತುಂಬಾ ಜನರಿದ್ದಾರೆ. ಅವರೆಲ್ಲರೂ ನನ್ನ ಸಂಬಂಧಿಕರಿದ್ದಂತೆ. ಚಾಮರಾಜಪೇಟೆಗೆ ಬಂದರೆ ಮೈಸೂರು- ಚಾಮರಾಜನಗರ ಜಿಲ್ಲೆ ನೋಡಿದಂತಾಗುತ್ತದೆ. ವಿಧಾನಸಭೆ ಚುನಾವಣೆಗೆ ಟಿಕೆಟ್‌ ಹಂಚಿಕೆ ಆದ ಮೇಲೆ ಪಕ್ಷದ ಕಾರ್ಯಕ್ರಮದಲ್ಲಿ ಇಲ್ಲಿ ಬಂದು ಇನ್ನೂ ಅನೇಕ ವಿಚಾರಗಳನ್ನು ಮಾತನಾಡುತ್ತೇನೆ ಎಂದು ಸಿಎಂ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next