Advertisement

ಅಂಬೇಡ್ಕರ್‌ ಅವರಿಂದಾಗಿ ಮೀಸಲಾತಿ

10:48 PM Apr 14, 2019 | Team Udayavani |

ಕುಂದಾಪುರ: ನಿಮ್ನ, ದಲಿತ ವರ್ಗ, ದೌರ್ಜನ್ಯಕ್ಕೊಳಗಾದವರಿಗೆಂದು ಪ್ರಪಂಚದಲ್ಲೇ ಮೊದಲ ಬಾರಿಗೆ ತಂದ ಮೀಸಲಾತಿ ಇಂದು ಎಲ್ಲ ವಿಧದ ಹಿಂದುಳಿದ ವರ್ಗದವರಿಗೂ ತಲುಪಿದೆ. ಇದಕ್ಕಾಗಿ ನಾವೆಲ್ಲ ಅಂಬೇಡ್ಕರ್‌ ಅವರನ್ನು ನೆನೆಯಬೇಕು ಎಂದು ಕುಂದಾಪುರ ಉಪವಿಭಾಗ ಸಹಾಯಕ ಕಮಿಷನರ್‌ ಡಾ| ಎಸ್‌.ಎಸ್‌. ಮಧುಕೇಶ್ವರ್‌ ಹೇಳಿದರು.

Advertisement

ಅವರು ರವಿವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ, ಮಹಾಮಾನವತಾವಾದಿ ಡಾ| ಬಿ. ಆರ್‌. ಅಂಬೇಡ್ಕರ್‌ ಅವರ 128ನೇ ಜನ್ಮ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ತಹಶೀಲ್ದಾರ್‌ ವೀರೇಂದ್ರ ಬಾಡ್ಕರ್‌ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಕೆ. ಕಿರಣ್‌ ಪೆಡೆ°àಕರ್‌, ಪೊಲೀಸ್‌ ಉಪ ಅಧೀಕ್ಷಕ ಬಿ.ಪಿ. ದಿನೇಶ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ ಕಾಮತ್‌, ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಉಪಸ್ಥಿತರಿದ್ದರು.

ಡಾ| ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರವೀಣ್‌ ಮೊಗವೀರ ಗಂಗೊಳ್ಳಿ ಪ್ರಧಾನ ಉಪನ್ಯಾಸ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್‌. ವೆರ್ಣೇಕರ್‌ ಸ್ವಾಗತಿಸಿ, ರಮೇಶ್‌ ಕುಲಾಲ್‌ ನಿರ್ವಹಿಸಿದರು. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ತಾಲೂಕು ಪಂಚಾಯತ್‌, ಕಂದಾಯ ಇಲಾಖೆ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡದ ಸಂಘಟನೆಗಳು ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

Advertisement

ಸಮಾನತೆಗಾಗಿ ಹೋರಾಟ
ಡಾ| ಅಂಬೇಡ್ಕರ್‌ ಅವರ ಹೆಸರಿಗೇ ಶಕ್ತಿ, ಉತ್ಸಾಹ, ಪ್ರೇರಣೆ ತುಂಬುವ ಚೈತನ್ಯ ಇದೆ. ಭಾರತದಲ್ಲಿದ್ದ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕುವ ದಿಟ್ಟ ನಿರ್ಧಾರ ಕೈಗೊಂಡವರು. ಸಂವಿಧಾನ ರಚನೆಯ ಮೂಲಕ ಮೌನಕ್ರಾಂತಿ, ರಕ್ತರಹಿತ ಕ್ರಾಂತಿ ಮಾಡಿದವರು. ದಲಿತರಿಗೆ ನಿರಾಕರಿಸಲ್ಪಟ್ಟಿದ್ದ ಕುಡಿಯುವ ನೀರು ಸಹಿತ ವಿವಿಧ ಸಮಾನತೆಗಾಗಿ ದಿಟ್ಟತನದಿಂದ ಹೋರಾಡಿದವರು.

ಕಾನೂನು, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ, ರಾಜ್ಯಶಾಸ್ತ್ರದ ಅಧ್ಯಯನ ಮಾಡಿದ ಮೇಧಾವಿಯಾಗಿದ್ದು ಅದನ್ನು ದೇಶದ ಜನರ ಏಳಿಗೆಗೆ ಉಪಯೋಗಿಸಿದರು.
-ಡಾ| ಎಸ್‌.ಎಸ್‌. ಮಧುಕೇಶ್ವರ್‌, ಸಹಾಯಕ ಕಮಿಷನರ್‌

Advertisement

Udayavani is now on Telegram. Click here to join our channel and stay updated with the latest news.

Next