ಸರ್ಕಾರ ಹೊರಡಿಸಿದ್ದ ಮೊದಲ ಹಾಗೂ ಪರಿಷ್ಕೃತ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಗಳ
ವಿಚಾರಣೆಯನ್ನು ಧಾರವಾಡದ ಹೈಕೋರ್ಟ್ ಸೆ.27ರಂದು ಮುಂದೂಡಿದೆ.
Advertisement
ಗುರುವಾರ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಎಸ್.ಸುನೀಲದತ್ ಯಾದವ ಅವರಿದ್ದ ನ್ಯಾಯಪೀಠ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವಿಳಂಬ, ನ್ಯಾಯಾಲಯಗಳ ಮಧ್ಯಪ್ರವೇಶ ಸರಿಯಲ್ಲ. ಹೀಗಾಗಿ ಈಗ ದಾಖಲಾಗಿರುವ ಪ್ರಕರಗಳನ್ನು ಶೀಘ್ರ ವಿಲೇವಾರಿ ಮಾಡುವುದು ಮುಖ್ಯವಾಗಿದ್ದು, ಮುಂದಿನ ವಿಚಾರಣೆ ಸಂದರ್ಭದಲ್ಲಿ ಉಭಯ ಪಕ್ಷಗಳು ಸಮಯಾವಕಾಶ ಕೇಳಬೇಡಿ ಎಂಬುದಾಗಿ ಸೂಚಿಸಿ, ಈ ಪ್ರಕರಣ ಕುರಿತು ತಕರಾರು ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿತು. ಇದಲ್ಲದೇ ಈ ಹಿಂದೆ ಸೆ.20 ರವರೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ನ್ಯಾಯಪೀಠ ಮತ್ತೆ ಮುಂದುವರಿಸಿದೆ.