Advertisement

ಶಿಕ್ಷಕರಿಗೆ ಸಂಶೋಧನಾ ಪ್ರವೃತ್ತಿ ಮುಖ್ಯ

06:11 PM Sep 13, 2020 | Suhan S |

ದಾವಣಗೆರೆ: ಮಕ್ಕಳಿಗೆ ಕಲಿಸುವ ಮತ್ತು ಸ್ವತಃ ಕಲಿಯುವ ವಿಚಾರದಲ್ಲಿ ಶಿಕ್ಷಕರಿಗೆ ಪ್ರೀತಿ, ವ್ಯಾಮೋಹ, ಉತ್ಸಾಹ ಇದ್ದಾಗ ಮಾತ್ರ ಸೇವೆಯಲ್ಲಿ ಸಂತೃಪ್ತಿ ಸಿಗಲು ಸಾಧ್ಯ. ಅಂತಹ ವ್ಯಾಮೋಹವನ್ನು ಪ್ರತಿಯೊಬ್ಬ ಶಿಕ್ಷಕರೂ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ| ಎಚ್‌.ವಿ. ವಾಮದೇವಪ್ಪ ಹೇಳಿದರು.

Advertisement

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವ ಗುಣ ಬೇಕು. ಆಳವಾದ ಕಳಕಳಿ, ಅತ್ಯುತ್ತಮ ಕಲಿಸುವಿಕೆ ಜೊತೆಗೆ ಸಂಶೋಧನಾರ್ಥಿಯಾಗಿಯೂ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲ ಶಿಕ್ಷಣ, ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯ, ಸಮುದಾಯ ಸಂಬಂಧಗಳ ಮೂಲಕ ಉನ್ನತ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಪಾಠ ಕಲಿಸಬೇಕು ಎಂದು ತಿಳಿಸಿದರು.

ಕುಲಸಚಿವ ಪ್ರೊ| ಬಸವರಾಜ ಬಣಕಾರ, ಪರೀಕ್ಷಾಂಗ ಕುಲಸಚಿವೆ ಪ್ರೊ| ಎಚ್‌.ಎಸ್‌. ಅನಿತಾ, ಹಣಕಾಸು ಅಧಿಕಾರಿ ಪ್ರೊ| ಗೋಪಾಲ ಎಂ. ಅಡವಿರಾವ್‌, ಕಲಾ ನಿಕಾಯದ ಡೀನ್‌ ಪ್ರೊ| ಕೆ.ಬಿ. ರಂಗಪ್ಪ, ವಿಜ್ಞಾನ ನಿಕಾಯದ ಡೀನ್‌ ಪ್ರೊ| ವಿ. ಕುಮಾರ್‌, ಐಕ್ಯೂಎಸಿ ನಿರ್ದೇಶಕಿ ಪ್ರೊ|ಗಾಯತ್ರಿ ದೇವರಾಜ್‌, ಡಾ| ಭೀಮಾಶಂಕರ ಜೋಶಿ ಮಾತನಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ಘಟಕದ ಸಂಯೋಜನಾಧಿಕಾರಿ ಕುಮಾರ್‌ ಸಿದ್ಧಮಲ್ಲಪ್ಪ ಸ್ವಾಗತಿಸಿದರು. ಡಾ| ರಮೇಶ್‌ ಚಂದ್ರಹಾಸ್‌ ವಂದಿಸಿದರು. ಡಾ| ಶಶಿಕಲಾನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ ಪ್ರಾಧ್ಯಾಪಕರಿಗೆ ಐಕ್ಯೂಎಸಿ ವತಿಯಿಂದ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು.

 

Advertisement

ಮಕ್ಕಳಲ್ಲಿ ಸೃಜನಶೀಲ ಶಿಕ್ಷಣ, ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯ, ಸಮುದಾಯ ಸಂಬಂಧಗಳ ಮೂಲಕ ಉನ್ನತ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಬೋಧನೆ ಮಾಡಬೇಕು. – ಪ್ರೊ| ಶರಣಪ್ಪ ವಿ. ಹಲಸೆ, ದಾವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next