ಶಿರಸಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಸೋದೆ ಜೈನ ಮಠದಲ್ಲಿ ಹಮ್ಮಿಕೊಂಡ ಐದು ದಿನಗಳ ರಾಷ್ಟ್ರ ಮಟ್ಟದ ಸಂಶೋಧನಾ ಕಮ್ಮಟಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಜೈನ ಮಠದ ಶ್ರೀಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ನೀಡಿದರು.
ಚಾಲನೆ ನೀಡಿದ ಹಿರಿಯ ಸಂಶೋಧಕ ಪ್ರೋ.ಎ.ವಿ.ನಾವಡ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ ಸಂಶೋಧನಾ ಸಂಗತಿಗೆ ಭದ್ರತೆಗೊಳಿಸುವ ಕಾರ್ಯ ಇದಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕಮ್ಮಟದ ನಿರ್ದೇಶಕ ಡಾ. ಕೆ.ಸಿ.ಶಿವಾರೆಡ್ಡಿ, ಕನ್ನಡಕ್ಕೆ ಬಂದಳಿಕೆ ಬಂದಿವೆ. ಅವನ್ನು ತೆಗೆಯಬೇಕು. ಸಾಹಿತ್ಯಕ್ಕೆ ಸಾವಿಲ್ಲ ಎಂದರು.
ಅಕಾಡೆಮಿ ರಜಿಸ್ಟ್ರಾರ ಕರಿಯಪ್ಪ ಎನ್., ನಿರಂತರವಾಗಿ ಸಾಹಿತ್ಯ ಅಕಾಡೆಮಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೋವಿಡ್ ನಂತದಿಂದ 700 ಕ್ಕೂ ಅಧಿಕ ಸಾಹಿತಿಗಳಿಂದ ಯುಟ್ಯೂಬ್ ಮೂಲಕ ನಿತ್ಯ ಸಾಹಿತ್ಯಾಭಿಮಾನಿಗಳನ್ನು ತಲುಪಿಲುತ್ತಿದ್ದೇವೆ ಎಂದರು.
ಕಮ್ಮಟದ ಸಹ ನಿರ್ದೇಶಕರಾದ ಡಾ. ಡಿ.ಕೆ.ಚಿತ್ತಯ್ಯ ಪೂಜಾರ್, ಡಾ. ಶುಭಾ ಮರವಂತೆ ಇತರರು ಇದ್ದರು.
ಕಲಾವತಿ ಮಧುಸೂಧನ ಪ್ರಾರ್ಥಿಸಿದರು. ಅಕಾಡೆಮಿ ರಜಿಸ್ಟ್ರಾರ ಕರಿಯಪ್ಪ ಎನ್, ಸದಸ್ಯ ಡಾ. ಜಿನದತ್ತ ಹಡಗಲಿ ನಿರ್ವಹಿಸಿದರು. ಸದಸ್ಯ ದತ್ತಗುರು ಹೆಗಡೆ ವಂದಿಸಿದರು.