Advertisement

ರೋಗ ತಡೆಗೆ ಸಂಶೋಧನೆ

12:30 AM Jan 07, 2019 | |

ಹೊಸದಿಲ್ಲಿ: ದೇಶದಲ್ಲೇ ಅತ್ಯಂತ ವಿಶಿಷ್ಟ ಯೋಜನೆಯನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದ್ದು, 103ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಲ್ಲಿ ಕಾಣಿಸಿ ಕೊಳ್ಳುವ ಸಾಮಾನ್ಯ ರೋಗಗಳ ನಿವಾರಣೆ ಹಾಗೂ ತಡೆಗೆ ಸಂಶೋಧನೆ ನಡೆಸ ಲಾಗುತ್ತದೆ. ಇದನ್ನು “ಮೈಕ್ರೋಬ್‌ ಪ್ರಾಜೆಕ್ಟ್’ ಎಂದು ಕರೆಯಲಾಗಿದ್ದು, 150 ಕೋಟಿ ರೂ. ಮೀಸಲಿಡಲಾಗಿದೆ.

Advertisement

ಈ ಯೋಜನೆ ಅಡಿಯಲ್ಲಿ 103 ಬುಡಕಟ್ಟು ಜನಾಂಗಗಳ 20,600 ಜನರ ರಕ್ತ, ಚರ್ಮ ಹಾಗೂ ಜೊಲ್ಲು ಮಾದರಿಯನ್ನು ಸಂಗ್ರಹಿ ಸಲಾಗುತ್ತದೆ. ಈ ಬುಡಕಟ್ಟು ಜನರು ತಮ್ಮ ಸಂಬಂಧಿಗಳಲ್ಲೇ ವಿವಾಹವಾಗುವುದರಿಂದ ಕೆಲವು ರೋಗಗಳು ಆನುವಂಶೀಯವಾಗಿ ಹರಡುತ್ತಿದ್ದು, ಇವರಲ್ಲಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಸ್‌ ಮತ್ತು ಇತರ ಸೂಕ್ಷ್ಮ ಜೀವಿಗಳನ್ನು ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಬೆಂಗಳೂರಿನ ಸಂಸ್ಥೆ: ಬೆಂಗಳೂರಿನ ಟ್ರಾನ್ಸ್‌ ಡಿಸಿಪ್ಲಿನರಿ ಹೆಲ್ತ್‌ ಸೈನ್ಸಸ್‌ ಮತ್ತು ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ ಹಾಗೂ ಇತರ 10 ಸಂಸ್ಥೆಗಳು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲಿವೆ. ಈ ಹಿಂದೆ ಬುಡಕಟ್ಟು ಅಥವಾ ಹಿಂದುಳಿದ ಜನರ ಮೇಲೆ ಮೈಕ್ರೋಬಯೋಮ್‌ ಅಧ್ಯಯನವನ್ನು ವಿಶ್ವದ ಇತರ ದೇಶಗಳಲ್ಲೂ ನಡೆಸಲಾಗಿದ್ದು, ಅದೇ ಮಾದರಿಯಲ್ಲಿ ಈ ಅಧ್ಯಯನ ನಡೆಸಲಾಗುತ್ತಿದೆ. ಅಮೆರಿಕ, ಇಂಗ್ಲೆಂಡ್‌ ಹಾಗೂ ಕೆನಡಾದಲ್ಲಿ ಯಶಸ್ವಿಯಾಗಿ ಈ ಅಧ್ಯಯನ ನಡೆಸಲಾ ಗಿದ್ದು, ಇದು ಜನರ ಮೈಕ್ರೋಬ್‌ಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವಲ್ಲಿ ಮಹತ್ವದ ದಾಖಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next