ಬಳಕೆಯಿಂದಲೂ ಜ್ಞಾನ ವೃದ್ಧಿ ಸಾಧ್ಯವಾಗಿದೆ. ಮೆಡಿಕಲ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಗ್ರಂಥಾ
ಲಯಗಳನ್ನು ಸುಸಜ್ಜಿತಗೊಳಿಸುವುದ ರೊಂದಿಗೆ ಸಂಶೋಧನೆಗಳಿಗೂ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ| ಸಚ್ಚಿದಾನಂದ ಅಭಿಪ್ರಾಯಪಟ್ಟರು.
Advertisement
ಕರ್ನಾಟಕ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಅಸೋಸಿಯೇಶನ್ (ಕೆಎಚ್‌ಎಸ್‌ಎಲ್‌ಎ) ಹಾಗೂ ದೇರಳಕಟ್ಟೆಯ ಯೇನಪೊಯ ಪರಿಗಣಿಸ ಲ್ಪಟ್ಟ ವಿ.ವಿ. ಆಶ್ರಯದಲ್ಲಿ ಯೇನಪೊಯ ವಿ.ವಿ. ಒಳಾಂಗಣ ಸಭಾಂ ಗಣದಲ್ಲಿ ನಡೆದ ಆರೋಗ್ಯ ವಿಜ್ಞಾನಗಳ ಗ್ರಂಥಾಲಯ ಅಸೋಸಿಯೇಶನ್‌ನ 11ನೇ ವಾರ್ಷಿಕ ಸಮ್ಮೇಳನ ಕೆಎಚ್‌ಎಸ್‌ಎಲ್‌ಎ – 2019ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ನಿವೃತ್ತ ಪ್ರಾಂಶುಪಾಲ ಪ್ರೊ| ಎಚ್.ಎಸ್. ಸಿದ್ದರಾಮಲ್ಲಯ್ಯ ದಿಕ್ಸೂಚಿ ಭಾಷಣ ಮಾಡಿದರು. ಯೇನಪೊಯ ವಿಶ್ವವಿದ್ಯಾನಿಲ ಯದ ಕುಲಪತಿ ಡಾ| ಎಂ. ವಿಜಯ ಕುಮಾರ್ ಅದ್ಯಕ್ಷತೆ ವಹಿಸಿದ್ದರು. ಸಹ ಕುಲಪತಿ ಪ್ರೊ| ಸಿ.ವಿ. ರಘುವೀರ್ ಭಾಗವಹಿಸಿದ್ದರು. ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ
ಮುಖ್ಯ ಗ್ರಂಥಪಾಲಕ ಬಸವಲಿಂಗಪ್ಪ ಎಸ್.ಕೆ. ಅವರನ್ನು ಸನ್ಮಾನಿಸಲಾಯಿತು.
Related Articles
ಪ್ರಸ್ತಾವನೆಗೈದರು. ಡಾ| ವೆಂಕಟೇಶ್ ವರದಿ ವಾಚಿಸಿದರು. ಡಾ| ರೋಶೆಲ್ ಟೆಲ್ಲಿಸ್ ಮತ್ತು ಡಾ| ಮಲ್ಲಿಕಾ ಶೆಟ್ಟಿ ನಿರೂಪಿಸಿದರು. ಡಾ| ಮಮತಾ ಪ್ರಮೋದ್ ಕುಮಾರ್ ವಂದಿಸಿದರು.
Advertisement