Advertisement

ಸಂಶೋಧನೆ ಎಂಬುದು ಮುಗಿಯದ ಕಲಿಕೆ: ಡಾ|ಎ.ಪಿ.

02:45 AM Jul 11, 2017 | Team Udayavani |

ನೆಹರೂನಗರ: ಜೀವನಚಕ್ರದಲ್ಲಿ ಸಂಶೋಧನೆಯ ಕ್ಷಣಗಳು ಬಹಳ ಮುಖ್ಯ. ಅದು ಮುಗಿಯದ ಕಲಿಕೆ. ಯುವ ಜನಾಂಗ ಸಂಶೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿ ಕೊಳ್ಳಬೇಕು. ಅನುಮಾನಗಳನ್ನು ಸ್ವ ಪ್ರಯೋಗಗಳ ಮೂಲಕ ಪರಿಹರಿಸಿಕೊಳ್ಳುವ ಪ್ರವೃತ್ತಿ ಯುವಜನಾಂಗದಲ್ಲಿ ಬೆಳೆಯಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ. ರಾಧಾಕೃಷ್ಣ ಹೇಳಿದರು.

Advertisement

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸಂಶೋಧನಾ ಮಾರ್ಗದರ್ಶನ ಕೇಂದ್ರ ಹಾಗೂ ವಿಜ್ಞಾನ ಸಂಘ ಜಂಟಿಯಾಗಿ ಆಯೋಜಿಸಿದ ಸ್ಟ್ರಾಟರ್‌ಜೀಸ್‌ ಫಾರ್‌ ರಿಸರ್ಚ್‌ ಆ್ಯಂಡ್‌ ಕೆರಿಯರ್‌ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಮಾಹಿತಿ ಇರುತ್ತದೆ. ಕಲಿಯುವ ಆಸಕ್ತಿಯೂ ಇರುತ್ತದೆ. ಆದರೆ ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಅದಕ್ಕಾಗಿ ಸೂಕ್ತ  ಮಾರ್ಗದರ್ಶನದ ಅಗತ್ಯತೆ ಇದೆ ಎಂದ ಅವರು ಭಾರತದ ಹೆಮ್ಮೆಯ ವಿಜ್ಞಾನಿ ಸರ್‌ ಸಿ.ವಿ. ರಾಮನ್‌ ಅವರನ್ನು ಉದಾಹರಣೆಯಾಗಿ ನೀಡಿದರು.

ವ್ಯವಧಾನ ವಿರಬೇಕು 
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌, ಸಂಶೋಧನೆ ಅನ್ನುವುದು ನಿರಂತರ ಪಕ್ರಿಯೆ. ಅದಕ್ಕಾಗಿ ಏಕಾಗ್ರತೆ, ಪರಿಶ್ರಮ, ಆಸಕ್ತಿ, ಕುತೂಹಲ ತಾಳ್ಮೆಯ ಆವಶ್ಯಕತೆಯಿದೆ. ಸಂಶೋಧಕನಾಗ ಬಯಸುವವವನಿಗೆ ನಿರ್ದಿಷ್ಟ ಸ್ಥಳದಲ್ಲಿ ಗರಿಷ್ಠ ಸಮಯ ಕುಳಿತುಕೊಳ್ಳುವ ವ್ಯವಧಾನ ವಿರಬೇಕು. ಉದ್ಯೋಗದ ದೃಷ್ಟಿಯಿಂದಲೂ ಕೌಶಲ್ಯ ಹಾಗೂ ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ.

ಈ ಸಂದರ್ಭದಲ್ಲಿ ಕಾರ್ಯಾಗಾರದ  ಸಂಪನ್ಮೂಲ ವ್ಯಕ್ತಿಗಳಾದ  ಮಂಗಳೂರು ಎ.ಐ.ಎಂ.ಐ.ಟಿ. ಯ ಎಂ.ಸಿ.ಎ. ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ್‌ ಬಿ. ಹಾಗೂ ಪುತ್ತೂರು ಅಂಬಿಕಾ ವಿದ್ಯಾಲಯದ ಉಪನ್ಯಾಸಕಿ ಗೀತಾ ಸಿ.ಕೆ. ಉಪಸ್ಥಿತರಿದ್ದರು.

Advertisement

ವಿದ್ಯಾರ್ಥಿನಿ ಸುನಾದಾ ಪಿ.ಜಿ. ಪ್ರಾರ್ಥಿಸಿದರು. ಕಾಲೇಜಿನ ಸಂಶೋಧನಾ ಮಾರ್ಗದರ್ಶನ ಕೇಂದ್ರದ ಸಂಚಾಲಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್‌ ಎಚ್‌.ಜಿ. ಸ್ವಾಗತಿಸಿ ಪ್ರಸ್ತಾವನೆಗೈದರು. ವಿಜ್ಞಾನ ಸಂಘದ ಸಂಚಾಲಕ, ಉಪನ್ಯಾಸಕ ಪ್ರೊ| ಶಿವಪ್ರಸಾದ್‌ ವಂದಿಸಿದರು. ಉಪನ್ಯಾಸಕಿ ವರ್ಷಾ ಮೊಳೆಯಾರ್‌ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಸಂಶೋಧಕರೇ 
ವಿಶೇಷ ಅಭ್ಯಾಗತರಾಗಿ ಆಗಮಿಸಿದ ಕಾಲೇಜಿನ ಶೈಕ್ಷಣಿಕ ಮೂಲತಃ ಎಲ್ಲರೂ ಸಂಶೋಧಕರೇ. ಚಿಕ್ಕಮಗು ಪ್ರಶ್ನೆಗಳ ಮೂಲಕ ಕುತೂಹಲವನ್ನು ತಣಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಆದರೆ ಬೆಳೆಯುತ್ತಾ ಹೋದಂತೆ ಅದು ಕಡಿಮೆಯಾಗುತ್ತಾ ಹೋಗುತ್ತದೆ. ನಮ್ಮಲ್ಲಿನ ಸಂಶೋಧಕನನ್ನು ಉಳಿಸಿಕೊಳ್ಳಬೇಕಾದರೆ ಆ ಪ್ರವೃತ್ತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಮುನ್ನಡೆಯಬೇಕು. ಸಂಶೋಧನೆ ಆಸಕ್ತಿ ಹಾಗೂ ಕುತೂಹಲವನ್ನು ತಣಿಸುವುದಕ್ಕಾಗಿ ಸೀಮಿತವಾಗಲಿ. ವ್ಯಾಪಾರ ದೃಷ್ಟಿಯಿಂದಲ್ಲ ಎಂದು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next