ಉಡುಪಿ: ಪ್ರಸಕ್ತ ತಂತ್ರಜ್ಞಾನ ಯುಗವು ಆಡಳಿತ ಶಾಸ್ತ್ರ ಮತ್ತು ನಿರ್ವಹಣೆಯ ಕಲಿಕೆಗೆ ಪೂರಕವಾಗಿದ್ದು, ತಂತ್ರಜ್ಞಾನದ ಸದ್ಬಳಕೆ ಮಾಡಿದಾಗ ಸಂಶೋಧನಾ ಕಾರ್ಯ ಸುಲಭ ಸಾಧ್ಯ. ವಿದ್ಯಾರ್ಥಿಗಳು ಸರಿಯಾದ ಗುರಿ, ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿದರೆ ಯಶಸ್ಸು ಸಾಧ್ಯ ಎಂದು ಮಾಹೆ ಸಂಶೋಧನಾ ಅಧ್ಯಯನ ವಿಭಾಗದ ನಿರ್ದೇಶಕಿ ಡಾ| ಶ್ಯಾಮಲ ಹಂದೆ ಹೇಳಿದರು.
ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಗಣದಲ್ಲಿ ನಡೆದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಾರ್ಷಿಕ ದಿನಾಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ| ಸತೀಶ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಕೊಡ ಮಾಡಿದ ಸ್ವರ್ಣಪದಕಗಳನ್ನು ವಿದ್ಯಾರ್ಥಿಗಳಾದ ವರುಣ್ ವಿವೇಕ ಶೆಟ್ಟಿ ಮತ್ತು ಅಂಕಿತಾ ಅವರಿಗೆ ನೀಡಲಾಯಿತು.ರಾಷ್ಟ್ರ ಹಾಗೂ ದಕ್ಷಿಣ ವಲಯದ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಡಾ| ರಾಜಶೇಖರನ್ ಪಿಳ್ಳೆ ಸ್ವಾಗತಿಸಿದರು. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿರ್ದೇಶಕ ಡಾ| ರವೀಂದ್ರನಾಥ ನಾಯಕ್ ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು.
ಅಂಕಿತಾ ಕಾರ್ಯಕ್ರಮ ನಿರೂಪಿಸಿದರು. ಡಾ| ಪಲ್ಲವಿ ಉಪಾಧ್ಯಾಯ ವಂದಿಸಿದರು.