Advertisement

ಕೊಂಕಣಿ ಭಾಷೆ, ಸಾಹಿತ್ಯ, ಜನಾಂಗೀಯ ವಿಷಯಗಳಲ್ಲಿ ಸಂಶೋಧನೆ

11:53 AM Nov 22, 2017 | |

ಮಹಾನಗರ: ಮಂಗಳೂರು ವಿಶ್ವ ವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠವು ಕೊಂಕಣಿ ಜಾನಪದ ಮತ್ತು ಸಾಹಿತ್ಯ ವಿಷಯದಲ್ಲಿ ಹಾಗೂ ಕೊಂಕಣಿ ಮೂಲ ಜನಾಂಗದ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ನಿರ್ಧರಿಸಿದೆ ಎಂದು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ| ಕೆ. ಭೈರಪ್ಪ ಹೇಳಿದರು. ಅವರು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆರಂಭವಾದ ಎರಡು ದಿನಗಳ ವಿಶ್ವ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದರು.

Advertisement

ಎರಡು ದಿನಗಳ ಹಿಂದೆ ನಡೆದ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗಿದೆ. ಈ ಉದ್ದೇಶಕ್ಕಾಗಿ ಇಬ್ಬರು ಸಂಶೋಧನಾ ವಿದ್ವಾಂಸರನ್ನು ನೇಮಿಸಿಕೊಳ್ಳಲು ನಿರ್ಣಯಿಸಲಾಗಿದೆ ಎಂದವರು ವಿವರಿಸಿದರು.

ವಿಶ್ವವಿದ್ಯಾನಿಲಯ ಕಳೆದ ವರ್ಷ ಆರಂಭಿಸಿದ ಕೊಂಕಣಿ ಎಂ.ಎ. ಕೋರ್ಸಿಗೆ ಹಲವು ಮಂದಿ ಸೇರ್ಪಡೆಗೊಂಡಿದ್ದಾರೆ. ಹಲವು ಅಡಚಣೆಗಳಿದ್ದರೂ ಕೋರ್ಸು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಪ್ರಾರಂಭದಲ್ಲಿ ಎಡರು ತೊಡರುಗಳು ಸಹಜ. ಮುಂದಿನ ದಿನಗಳಲ್ಲಿ ಈ ಕೋರ್ಸು ಜನಪ್ರಿಯ ಆಗುವುದರಲ್ಲಿ ಸಂದೇಹವಿಲ್ಲ ಎಂದರು.

ಕೊಂಕಣಿ ಜನರು ಶ್ರಮ ಜೀವಿಗಳು. ಎಲ್ಲ ಜಾತಿ, ಜನಾಂಗದವರು ಕೊಂಕಣಿ ಭಾಷೆಯನ್ನು ಮಾತನಾಡುತ್ತಿದ್ದು, ಈ ಭಾಷೆ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುತ್ತದೆ. ಕರ್ನಾಟಕದಲ್ಲಿ ಈ ಭಾಷೆಗೆ ವಿಶಿಷ್ಟ ಸ್ಥಾನವಿದೆ ಎಂದು ಹೇಳಿದ ಅವರು, ಎಲ್ಲ ವಿಧದ ರಾಜಕೀಯಗಳನ್ನು ಬದಿಗೊತ್ತಿ ಕೊಂಕಣಿ ಜನರು ಒಮ್ಮನ ಸ್ಸಿನಿಂದ ತಮ್ಮ ಮಾತೃ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕಾರ್ಯೋನ್ಮುಖರಾಗಬೇಕು ಎಂದರು.

ಶ್ಲಾಘನೆ
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಬದುಕನ್ನು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಗಾಗಿ ಮುಡಿಪಾಗಿಟ್ಟಿದ್ದಾರೆ ಎಂದು ಶ್ಲಾಘಿಸಿದರು.

Advertisement

ಪ್ರಸುತ ಮಕ್ಕಳ ಸಾಹಿತ್ಯ ಅವಶ್ಯ
ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸಲಹೆಗಾರ ತಾನಾಜಿ ಹಲರ್ನ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಇವತ್ತಿನ ಕಾಲದಲ್ಲಿ ಮಕ್ಕಳಿರುವ ಮನೆಗಳಲ್ಲಿ ಅಜ್ಜ ಅಜ್ಜಿಯಂದಿರಿಲ್ಲ. ತಂದೆ ತಾಯಿ ಕೆಲಸಕ್ಕೆ ಹೋಗುವುದರಿಂದ ಅವರೂ ಮನೆಯಲ್ಲಿ ಇರುವುದಿಲ್ಲ. ಶಾಲೆಯಲ್ಲಿ ಪಠ್ಯದ ಹೊರೆಯೇ ಮಕ್ಕಳಿಗೆ ಜಾಸ್ತಿಯಾಗಿರುತ್ತದೆ. ಹಾಗಿರುವಾಗ ಮಕ್ಕಳಿಗೆ ಕಥೆ ಹೇಳುವರಾರು ಎಂದು ಪ್ರಶ್ನಿಸಿದ ಅವರು ಈ ಕೊರತೆಯನ್ನು ಮಕ್ಕಳ ಸಾಹಿತ್ಯ ನೀಗಿಸಬೇಕು. ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಸಾಹಿತ್ಯವನ್ನು ಮಕ್ಕಳಿಗೆ ಒದಗಿಸಬೇಕಾಗಿದೆ ಎಂದರು.

ಮಕ್ಕಳು ಏನು ಓದುತ್ತಾರೆ, ಯಾವುದನ್ನು ಓದಬೇಕು ಮತ್ತು ಯಾವುದನ್ನು ಓದಬಾರದು ಎಂಬ ಸವಾಲುಗಳು ನಮ್ಮ ಮುಂದಿವೆ ಎಂದ ರು. ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಸ್ವಾಗತಿಸಿ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ| ಕಿರಣ್‌ ಬುಡುRಲೆ ಪ್ರಸ್ತಾವನೆಗೈದರು. ಬಿ. ಪ್ರಭಾಕರ ಪ್ರಭು ವಂದಿಸಿದರು ಬಿ.ಆರ್‌. ಭಟ್‌ ವೇದಿಕೆಯಲ್ಲಿದ್ದರು.

ಅಜ್ಜಿ ಕಥೆಗಳು ಬಿಡುಗಡೆ
ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ 17 ಪುಸ್ತಕಗಳನ್ನು ಮತ್ತು ಅಜ್ಜಿ ಕಥೆಗಳು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪಿ. ರಮೇಶ್‌ ಪೈ ಮತ್ತು ಗುರು ಬಾಳಿಗ ಅವರು ಪುಸ್ತಗಳನ್ನು ಮತ್ತು ಲೇಖಕರನ್ನು ಪರಿಚಯಿಸಿದರು.

ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಸಲ್ಲದು
ಮಕ್ಕಳ ಸಾಹಿತ್ಯವು ಮಕ್ಕಳಲ್ಲಿ ಭಾಷೆ ಮತ್ತು ಸಾಹಿತ್ಯದ ಬಗೆಗೆ ಪ್ರೀತಿಯನ್ನು ಹುಟ್ಟಿಸುತ್ತದೆ ಹಾಗೂ ಜ್ಞಾನವನ್ನು ವೃದ್ಧಿಸುತ್ತದೆ. ಹಾಗಾಗಿ ಮಕ್ಕಳ ಸಾಹಿತ್ಯವನ್ನು ನಿರ್ಲಕ್ಷಿಸುವಂತಿಲ್ಲ . ಕೊಂಕಣಿ ಭಾಷೆಗೆ ಸಂಬಂಧಿಸಿ ಸಂಶೋಧನಾ ಜರ್ನಲ್‌ ಒಂದನ್ನು ಹೊರ ತರುವ ಆವಶ್ಯಕತೆ ಇದೆ. 
ಪ್ರೊ| ವರುಣ್‌ ಸಾಹ್ನಿ , ಕುಲಪತಿ
   ಗೋವಾ ವಿಶ್ವವಿದ್ಯಾನಿಲಯ

ಮಕ್ಕಳ ಸಾಹಿತ್ಯ ಸಂಪ್ರದಾಯದ ಚೌಕಟ್ಟಿನಿಂದ ಹೊರಗೆ ಬರಲಿ
ಖ್ಯಾತ ಮಲಯಾಳಿ ಲೇಖಕ ಎನ್‌.ಎಸ್‌. ಮಾಧವನ್‌ ಅವರು ಈ ವರ್ಷದ ವಿಶ್ವ ಕೊಂಕಣಿ ಸಮ್ಮೇಳನದ ವಿಷಯ ‘ಮಕ್ಕಳ  ಹಿತ್ಯ’ದ ಕುರಿತು ಮುಖ್ಯ ಭಾಷಣ ಮಾಡಿದರು. ಮಕ್ಕಳ ಸಾಹಿತ್ಯ ಎನ್ನುವುದು ಈಗಲೂ ಈ ಹಿಂದಿನಂತೆ ಕಥಾ ಹಂದರದಲ್ಲಿಯೇ ಮುಂದುವರಿಯುತ್ತಿದೆ. ಇದು ಸರಿಯಲ್ಲ. ಮಕ್ಕಳ ಸಾಹಿತ್ಯವು ತನ್ನ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರ ಬಂದು ಇಂದಿನ ವಾಸ್ತವ ಜೀವನದ ಸ್ಥಿತಿ ಗತಿಗಳಿಗೆ ಸ್ಪಂದಿಸಬೇಕು. ಈ ದಿಶೆಯಲ್ಲಿ ಮಕ್ಕಳ ಸಾಹಿತಿಗಳು ಗಮನ ಹರಿಸ ಬೇಕು ಎಂದವರು ಸಲಹೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next