Advertisement
ತಾಲೂಕಿನ ಸೊಟಕನಾಳ ಗ್ರಾಮದ ರೈತ ಹೇಮರಡ್ಡಿ ವೆಂಕರಡ್ಡಿ ನಾವಳ್ಳಿ(60) ಹಳ್ಳದ ಅರಿವು ಇಲ್ಲದೇ ಜಮೀನಿನ ಕೆಲಸಕ್ಕೆಂದು ಹೋಗಿದ್ದ. ಸಂಜೆ ಬೆಣ್ಣೆಹಳ್ಳ ಪ್ರವಾಹ ಬಂದಿರುವುದರಿಂದ ಆತನಿಗೆ ಬರಲು ಸಾಧ್ಯವಾಗಿಲ್ಲ. ನಡುಗಡ್ಡೆಯ ಮಧ್ಯೆ ಸಿಲುಕಿದ್ದ ರೈತನ ಹತ್ತಿರ ಮೊಬೈಲ್ ಇಲ್ಲದೇ ಇರುವುದರಿಂದ ಆತನಿಗೆ ತಾನು ಅಪಾಯದಲ್ಲಿ ಇರುವುದನ್ನು ತಿಳಿಸಲು ಆಗಿರಲಿಲ್ಲ. ಮನೆಯವರು ಹೊಲಕ್ಕೆ ಹೋದವರು ಬರದೆ ಇರುವುದನ್ನು ಕಂಡು ಹಳ್ಳದ ದಂಡೆಯಲ್ಲಿ ಕೂಗಿದಾಗ ನಡುಗಡ್ಡೆಯಲ್ಲಿ ಸಿಲುಕಿರುವುದು ತಿಳಿದು ಬಂದಿದೆ. ನಂತರ ಗ್ರಾಮಸ್ಥರು ತಾಲೂಕಾಡಳಿತಕ್ಕೆ ತಿಳಿಸಿದ ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾತಂಡ ಹಾಗೂ ಅಮರಗೋಳದ ಈಜು ತಜ್ಞರ ಸಹಾಯದಿಂದ ಬೋಟ್ ಮೂಲಕ ನಡುಗಡ್ಡೆಯಲ್ಲಿದ್ದ ರೈತನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ನಡುಗಡ್ಡೆಯ ರೈತರು ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ನಮ್ಮ ಕಷ್ಟ ಕೇಳುವವರೆ ಇಲ್ಲ ಎಂದು ಸೊಟಕನಾಳ ಗ್ರಾಮದ ರೈತ ರಂಗರಡ್ಡಿ ಕಿರೇಸೂರ ನೋವು ತೋಡಿಕೊಳ್ಳುತ್ತಾರೆ.