Advertisement

Rescue: ಕೇರಳದ ಬೆಟ್ಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಬೆಂಗಳೂರಿನ 10 ಮಹಿಳೆಯರ ರಕ್ಷಣೆ

11:58 AM Jul 15, 2024 | Team Udayavani |

ಕೊಚ್ಚಿ: ಕೇರಳದ ಇಡುಕ್ಕಿ ಜಿಲ್ಲೆಯ ನಲುಮಾಲ ವ್ಯೂ ಪಾಯಿಂಟ್‌ಗೆ ತೆರಳಿ ಮಳೆಯಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ ಬೆಂಗಳೂರಿನ 10 ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಶುಕ್ರವಾರ (ಜು.19) ಬೆಂಗಳೂರಿನ 10 ಮಹಿಳೆಯರು ಸೇರಿದಂತೆ ಒಟ್ಟು 38 ಮಂದಿ ಬೆಟ್ಟಕ್ಕೆ 22 ವಾಹನಗಳಲ್ಲಿ ನೆಡುಂಕಂದಂ ಬೆಟ್ಟ ಸಮೀಪ ಇರುವ ನಲುಮಾಲ ವ್ಯೂ ಪಾಯಿಂಟ್‌ಗೆ ಅವರೆಲ್ಲರೂ ಆಗಮಿಸಿದ್ದರು. ಆಗ ಧಾರಾಕಾರ ಮಳೆ ಸುರಿಯಲಾರಂಭಿಸಿತ್ತು. ಹೀಗಾಗಿ, ಮಳೆಯಿಂದಾಗಿ ಮಂಜು ಕೂಡ ಮುಸುಕಲು ಆರಂಭವಾಗಿತ್ತು. ಇದರಿಂದಾಗಿ ವ್ಯೂ ಪಾಯಿಂಟ್‌ಗೆ ಆಗಮಿಸಿದ್ದವರು ವಾಹನಗಳ ಮೂಲಕ ವಾಪಸ್‌ ತೆರಳಲು ಅಸಾಧ್ಯವಾಗಿತ್ತು. ಇದರ ಜತೆಗೆ ಕಡಿದಾಗಿರುವ ರಸ್ತೆಯಲ್ಲಿ ಮಣ್ಣು ಸಹಿತ ನೀರು ಧಾರಾಕಾರವಾಗಿ ಹರಿಯಲಾರಂಭಿಸಿತ್ತು. ಹೀಗಾಗಿ, ರಾತ್ರಿಯಿಡೀ ಗುಡ್ಡದ ಮೇಲೆ ಅವರು ಕಾಲ ಕಳೆಯುವಂತಾಗಿತ್ತು. ಹೀಗಾಗಿ, ಪ್ರವಾಸಿಗರ ಪೈಕಿ ಕೆಲವರು ಗುಡ್ಡದ ಮೇಲಿನಿಂದ ನಡೆಯುತ್ತಾ ನೆಡುಮಕಂದಂಗೆ ತೆರಳಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಅವರು ಪೊಲೀಸರು, ಸಾರಿಗೆ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಜತೆಗೂಡಿ  ಶನಿವಾರ ಮಧ್ಯಾಹ್ನ 2 ಗಂಟೆಗೆ ವ್ಯೂ ಪಾಯಿಂಟ್‌ಗೆ ತೆರಳಿ, ಸಿಕ್ಕಿ ಹಾಕಿಕೊಂಡಿರುವವರನ್ನು ರಕ್ಷಿಸಿದ್ದಾರೆ. ಮಳೆಗಾಲದಲ್ಲಿ ವ್ಯೂ ಪಾಯಿಂಟ್‌ಗೆ ವಾಹನದಲ್ಲಿ ತೆರಳಲು ನಿಷೇಧ ಹೇರಲಾಗಿದೆ. ಹೀಗಿದ್ದರೂ, ಪ್ರವಾಸಿಗರು ಅಲ್ಲಿಗೆ ತೆರಳಿದ್ದರಿಂದ ಅವರ ಮೇಲೆ ಕೇಸು ದಾಖಲಿಸಲಾಗಿದೆ.

ವಾಹನಗಳನ್ನು ವಶಪಡಿಸಿಕೊಂಡಿದ್ದರೂ, ಅವುಗಳನ್ನು ಮಾಲೀಕರಿಗೆ ಬಿಟ್ಟುಕೊಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಲುಮಾಲ ವ್ಯೂ ಪಾಯಿಂಟ್‌ ಬಗ್ಗೆ ತಿಳಿದು ಬಂದಿದ್ದರಿಂದ ಅಲ್ಲಿಗೆ ತೆರಳಿದ್ದರು. ಸದ್ಯ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next