Advertisement
ಮೆಸ್ಕಾಂ ಎದುರುಗಡೆ ಇರುವಂತಹ ಡಿವೈಡರ್‌ನಲ್ಲಿ ಬಾಯ್ದೆರೆದುಕೊಂಡ ಸ್ಥಿತಿಯಲ್ಲಿ ಎಲ್‌ಟಿಡಿ ಬಾಕ್ಸ್ ಇತ್ತು. ನಡೆದಾಡುವವರಿಗೆ, ವಾಹನ ಸವಾರರಿಗೆ ಇದು ಅಪಾಯ ಸೂಚಿಸುತ್ತಿತ್ತು. ಇದೀಗ ಸರಿಪಡಿಸಲಾಗಿದ್ದು, ಹೊಸ ಪೆಟ್ಟಿಗೆ ಅಳವಡಿಸಲಾಗಿದೆ. ಅದೇ ರೀತಿ ಇದೇ ರಸ್ತೆಯ ಕಾಪಿಕಾಡ್ ಬಳಿ ಡಿವೈಡರ್‌ನಲ್ಲಿ ಇದ್ದಂತಹ ಎರಡು ಅಪಾಯಕಾರಿ ವಿದ್ಯುತ್ ಸರಬರಾಜು ಪೆಟ್ಟಿಗೆಯನ್ನು ಕೂಡ ಬದಲಾವಣೆ ಮಾಡಲಾಗಿದೆ.ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆ ಆಗದಿರುವ ಕಾರಣ ಸಾರ್ವಜನಿಕರಿಗೆ ಎದುರಾಗಿರುವ ಅಪಾಯದ ಕುರಿತಂತೆ “ಸುದಿನ’ವು “ವಿದ್ಯುತ್-ಆಪತ್ತು ಇರಲಿ ಎಚ್ಚರ’ ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನ ಕೈಗೊಂಡಿತ್ತು. ಅಭಿಯಾನದ ಪರಿಣಾಮವಾಗಿ ಮೆಸ್ಕಾಂ, ಮಹಾನಗರ ಪಾಲಿಕೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಭೆ ನಡೆಸಿ, ನಗರದಲ್ಲಿ ವಿದ್ಯುತ್‌ನಿಂದ ಶಾಕ್ ಹೊಡೆಯಬಹುದಾದ ಅಪಾಯಕಾರಿ ಸ್ಥಳಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದರು.