Advertisement

ಅಭಿನಂದನ್‌ ಕತೆ ಹೋಲುವ ಸಿನಿಮಾ

12:30 AM Mar 12, 2019 | Team Udayavani |

ರೆಸ್ಕೊ ಡಾನ್‌
ನಿರ್ದೇಶಕ: ವೆರ್ನರ್‌ ಹೆಝಾìಗ್‌
ಅವಧಿ: 125 ನಿಮಿಷ 

Advertisement

ಭಾರತದ ವೀರಯೋಧ ಅಭಿನಂದನ್‌ ವರ್ತಮಾನ್‌ರ ವೈಮಾನಿಕ ದಾಳಿಯ ಘಟನೆಯನ್ನೇ ನೆನಪಿಸುವಂಥ ಸಿನಿಮಾ ರೆಸ್ಕೊ ಡಾನ್‌. ಅದು ವಿಯೆಟ್ನಾಂ ಸಮರದ ದಿನಗಳಲ್ಲಿ ನಡೆದಂಥ ನೈಜ ಕತೆ. ಅಮೆರಿಕದ ನೌಕಾಪಡೆಯ ಪೈಲಟ್‌, ಡಗ್ಲಸ್‌ ಎ1 ಸ್ಕೈ ರೈಡರ್‌ ಎಂಬ ಯುದ್ಧವಿಮಾನವನ್ನು ಬಳಸಿ, ವಿಯೆಟ್ನಾಂ ಮೇಲೆ ಬಾಂಬ್‌ ದಾಳಿಗೆ ಮುಂದಾಗುತ್ತಾನೆ. ಕಾರ್ಯಾಚರಣೆ ಹೆಚ್ಚಾಕಮ್ಮಿ ಯಶಸ್ವಿಯೇ ಆದರೂ ಆಕಸ್ಮಿಕವಾಗಿ, ವಿಮಾನ ಒಂದು ಬೆಟ್ಟಕ್ಕೆ ತಗುಲಿ ಉರುಳಿಬೀಳುತ್ತದೆ. ವಿಮಾನದಿಂದ ಜಿಗಿಯುವ ಪೈಲಟ್‌, ವಿಯೆಟ್ನಾಂನ ಹಳ್ಳಿಯ ಜನರ ಕೈಗೆ ವಶವಾಗುತ್ತಾನೆ. 

ಆ ಹಳ್ಳಿಯಲ್ಲಿ ಈತನಂತೆ ಸೆರೆಯಾದ ಹತ್ತಾರು ಯುದ್ಧ ಕೈದಿಗಳು ಚಿತ್ರಹಿಂಸೆ ಅನುಭವಿಸುತ್ತಿರುತ್ತಾರೆ. ಪೈಲಟ್‌ ಕೂಡ ಹಳ್ಳಿಗರ ಚಿತ್ರಹಿಂಸೆಗೆ ಗುರಿಯಾಗಿ, ಅಲ್ಲಿಂದ ಪಾರಾಗಲು ಯೋಚಿಸುತ್ತಾನೆ. ಕೊನೆಗೂ ಅವರ ಕಣ್ತಪ್ಪಿಸಿಕೊಂಡು, ಕಾಡು ಪಾಲಾಗುತ್ತಾನೆ. ಹಳ್ಳಿಯ ದುಷ್ಟರು ಅಲ್ಲಿಯೂ ಬಿಡುವುದಿಲ್ಲ. ಪೈಲಟ್‌, ನದಿಯಲ್ಲಿ, ಕಣಿವೆಗಳಲ್ಲಿ ಓಡುವಾಗ ಅಮೆರಿಕ ಸೇನಾ ಪಡೆಯ ಹೆಲಿಕಾಪ್ಟರ್‌ ಬಂದು ಆತನನ್ನು ರಕ್ಷಿಸುತ್ತದೆ. ತುದಿಗಾಲಿನಲ್ಲಿ ನಿಂತು ನೋಡುವಂತೆ ಪ್ರೇರೇಪಿಸುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ, ಕ್ರಿಶ್ಚಿಯನ್‌ ಬೇಲ್‌ ಚಿತ್ರದುದ್ದಕ್ಕೂ ಕಾಡುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next