Advertisement

ಮುಂದುವರಿದ ಮರುಬಿಡುಗಡೆ ಪರ್ವ

01:05 PM Oct 23, 2020 | Suhan S |

ಕಳೆದ ವಾರ ಮರು ಬಿಡುಗಡೆಯಾದ ಚಿತ್ರಗಳಿಗೆ ಪ್ರೇಕ್ಷಕ ಉತ್ತಮ ಪ್ರತಿಕ್ರಿಯೆ ತೋರಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿದೆ. ಜೊತೆಗೆ ರೀ ರಿಲೀಸ್‌ ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವ ತಂತ್ರ ಮುಂದುವರೆದಿದೆ. ಪರಿಣಾಮವಾಗಿ ಈ ವಾರ ಅನೇಕ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ.

Advertisement

ವಿಶೇಷವೆಂದರೆ ಹೀಗೆ ಬಿಡುಗಡೆಯಾಗುತ್ತಿರುವ ಬಹುತೇಕ ಸಿನಿಮಾಗಳು ಸ್ಟಾರ್‌ಗಳು ನಟಿಸಿರೋದು. ದರ್ಶನ್‌, ಪುನೀತ್‌, ಯಶ್‌, ಶಿವರಾಜ್‌ಕುಮಾರ್‌, ಸುದೀಪ್‌… ಹೀಗೆ ಅನೇಕ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಮೂಲಕ ಸ್ಟಾರ್‌ಗಳ ಅಭಿಮಾನಿಗಳನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನಕ್ಕೆ ವಿತರಕರು ಮುಂದಾಗಿದ್ದಾರೆ. ಈ ವಾರ ಸ್ಟಾರ್‌ಗಳ ಹಾಗೂ ಹೊಸಬರ ಚಿತ್ರಗಳು ಜೊತೆ ಜೊತೆಯಾಗಿ ಮರುಬಿಡುಗಡೆಯಾಗುತ್ತಿವೆ. ಇದರಿಂದಾಗಿ ಭಿನ್ನ-ವಿಭಿನ್ನ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಮತ್ತೂಮ್ಮೆ ಸಿಕ್ಕಿದೆ.

ಹಾಗಾದರೆ ಈವಾರ ತೆರೆಕಾಣುತ್ತಿರುವ ಚಿತ್ರಗಳು ಯಾವುವು ಎಂದು ನೋಡೋದಾದರೆ, “ಕೋಟಿಗೊಬ್ಬ-2′, “ಕೆಜಿಎಫ್’, “ಕುರುಕ್ಷೇತ್ರ’, “ಟಗರು’, “ಮಫ್ತಿ’, “ರಾಜ್‌ಕುಮಾರ’, “ನಾಗರಹಾವು’, “ವಜ್ರಮುಖೀ’, “ದಿಯಾ’, “ದಮಯಂತಿ’, “ರಗಡ್‌’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇನ್ನು ಕೆಲವು ಚಿತ್ರಗಳು ಸದ್ದಿಲ್ಲದೇ ತಾಲೂಕು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ 11ಕ್ಕೂ ಹೆಚ್ಚು ಸಿನಿಮಾಗಳು ಈ ವಾರ ಮರುಬಿಡುಗಡೆಯಾಗುತ್ತಿವೆ ಎನ್ನಬಹುದು. ಹಾಗಾದರೆ ಈ ಚಿತ್ರಗಳ ಮುಖ್ಯಚಿತ್ರಮಂದಿರ ಯಾವುದು, ಕೆ.ಜಿ.ರಸ್ತೆಯ ಯಾವ ಚಿತ್ರಮಂದಿದಲ್ಲಿ ಈ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದು ನೀವು ಕೇಳಬಹುದು. ಆದರೆ, ಬಹುತೇಕ ಚಿತ್ರಗಳು ಈ ಬಾರಿ ಸಿಂಗಲ್‌ ಸ್ಕ್ರೀನ್‌ಗಿಂತ ಮಲ್ಟಿಪ್ಲೆಕ್ಸ್‌ ನಂಬಿಕೊಂಡಿವೆ. ಅದಕ್ಕೆ ಕಾರಣ ಇನ್ನೂ ದೊಡ್ಡ ಮಟ್ಟದಲ್ಲಿ ಸಿಂಗಲ್‌ ಸ್ಕ್ರೀನ್‌ಓಪನ್‌ ಆಗದಿದ್ದರಿಂದ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನವಾಗುತ್ತಿವೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಈ ವಾರ ಮರುಬಿಡುಗಡೆಯಾಗುತ್ತಿರುವ ಬಹುತೇಕ ಸಿನಿಮಾಗಳೆಲ್ಲವೂ ಒಮ್ಮೆ ತೆರೆಕಂಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದವು. ಈಗ ಮತ್ತೂಮ್ಮೆ ಮೆಚ್ಚುಗೆ ಗಳಿಸಲು ಬರುತ್ತಿವೆ. ಒಂದರ್ಥದಲ್ಲಿ ಹೇಳುವುದಾದರೆ ಈ ವರ್ಷಾಂತ್ಯದಿಂದಲೇ ಸ್ಟಾರ್‌ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ.

ಮೊದಲ ಹಂತವಾಗಿ ರೀ ರಿಲೀಸ್‌ ಚಿತ್ರಗಳು ತೆರೆಕಂಡರೆ, ಡಿಸೆಂಬರ್‌ ಕೊನೆಯವಾರದಿಂದ ಸ್ಟಾರ್‌ಗಳ ಹೊಸ ಚಿತ್ರಗಳು ಬಿಡುಗಡೆಯಾಗಲಿವೆ. “ಕೋಟಿಗೊಬ್ಬ-3′, “ಪೊಗರು’, “ಸಲಗ’, “ರಾಬರ್ಟ್‌’ “ಭಜರಂಗಿ-2′, “ಯುವರತ್ನ’, “ಕೆಜಿಎಫ್-2’… ಹೀಗೆ ಸ್ಟಾರ್‌ಗಳ ನಿರೀಕ್ಷಿತ ಚಿತ್ರಗಳು ತೆರೆಗಪ್ಪಲಿಸಲಿವೆ.­

Advertisement

ನಮ್ಮ ಶಿವಾರ್ಜುನ ಚಿತ್ರ ಚೆನ್ನಾಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಜನ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ನಡುವೆಯೇ ಜೂನಿಯರ್‌ ಚಿರು ಬಂದಿರೋದು ಖುಷಿ ಕೊಟ್ಟಿದೆ.-ಶಿವಾರ್ಜುನ್‌, ನಿರ್ಮಾಪಕರು

 

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next