Advertisement
ಹೌದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ಕಾಯ್ದೆಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳ ಪ್ರಕಾರ 500 ಚದರ ಮೀಟರ್ (ಐದು ಸಾವಿರ ಚದರಡಿಗಿಂತ ಮೇಲ್ಪಟ್ಟ) ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ವಸತಿ ಸಮುಚ್ಚಯಕ್ಕೆ ಮಾತ್ರ ಅನುಮತಿ. ಹೀಗಾಗಿ, ಅದಕ್ಕಿಂತ ಕಡಿಮೆ ವಿಸ್ತೀರ್ಣದ ಯೋಜನೆಗಳಿಗೆ ಅನುಮತಿ ಸಿಗುವುದೇ ಅನುಮಾನ ಎಂದು ಮೂಲಗಳು ತಿಳಿಸಿವೆ.
Related Articles
Advertisement
ದೊಡ್ಡ ದೊಡ್ಡ ಕಂಪನಿಗಳು ಸಹ ಕೇಂದ್ರ ಸರ್ಕಾರದ ರಿಯಲ್ ಎಸ್ಟೇಟ್ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಪರಿಪೂರ್ಣವಾಗಿ ಪಾಲಿಸಲೇಬೇಕು. ಬಿಲ್ಟಪ್ ಏರಿಯಾ (ಒಟ್ಟಾರೆ ನಿರ್ಮಿತ ಪ್ರದೇಶ) ಕಾಪೆìಟ್ ಏರಿಯಾ (ವಾಸಯೋಗ್ಯ ಪ್ರದೇಶ) ವಿಚಾರದಲ್ಲೂ ಸ್ಪಷ್ಟವಾಗಿ ಒಪ್ಪಂದದಲ್ಲೇ ತಿಳಿಸಬೇಕು. ಸರ್ಕಾರಿ ಮಾರ್ಗಸೂಚಿ ದರವನ್ನೇ ಆಧಾರವಾಗಿಟ್ಟುಕೊಂಡು ದರ ನಿಗದಿಪಡಿಸಬೇಕು ಎಂಬ ಅಂಶಗಳು ನಿಯಮಾವಳಿಯಲ್ಲಿ ಸೇರಿವೆ.
ಪ್ರತಿ ಯೋಜನೆಯ ಕಾಮಗಾರಿ ಆರಂಭಿಕ ಪ್ರಮಾಣ ಪತ್ರ (ಕಮೆಸ್°ಮೆಂಟ್ ಸರ್ಟಿಫಿಕೇಟ್) ಆ ನಂñರ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣಪತ್ರ (ಕಂಪ್ಲೀಷನ್ ಸರ್ಟಿಫಿಕೇಟ್) ಕೊನೆಯದಾಗಿ ಸ್ವಾಧೀನ ಪ್ರಮಾಣಪತ್ರ (ಆಕ್ಯುಪೇಷನ್ ಸರ್ಟಿಫಿಕೇಟ್) ಈ ಮೂರು ಪ್ರಮಾಣಪತ್ರಗಳು ನೀಡುವಾಗ ಸಕ್ಷಮ ಪ್ರಾಧಿಕಾರಗಳು ಪಾಲಿಸಬೇಕಾದ ಕ್ರಮಗಳ ಬಗ್ಗೆಯೂ ನಿಯಮಾವಳಿಯಲ್ಲಿ ಸ್ಪಷ್ಟ ಸೂಚನೆಗಳಿದ್ದು ಯಾವುದೇ ಹಂತದಲ್ಲೂ ಲೋಪ ಅಥವಾ ಅಕ್ರಮ ಎಸಗಲು ಅವಕಾಶ ಇಲ್ಲ. ನಿಯಂತ್ರಣ ಪ್ರಾಧಿಕಾರದ ಅನುಮತಿಯೇ ಅಂತಿಮವಾಗಲಿದೆ ಎಂದು ಹೇಳಲಾಗಿದೆ.
ಬ್ಯಾಂಕ್ ಸಾಲ ಪಡೆಯುವ ಹಾಗೂ ಸಾಲ ಮಂಜೂರಾದ ಮೇಲೆ ಮಾಲೀಕನಿಗೆ ಯಾವ ಹಂತದಲ್ಲಿ ಎಷ್ಟೆಷ್ಟು ಮೊತ್ತ ಸಂದಾಯವಾಗಬೇಕು. ಯಾವ ಆಧಾರದಲ್ಲಿ ಬ್ಯಾಂಕುಗಳ ಯೋಜನೆಗಳಿಗೆ ಸಾಲ ನೀಡಬೇಕು ಎಂಬ ಅಂಶವೂ ನಿಯಮಾವಳಿಯಲ್ಲಿದೆ ಎನ್ನಲಾಗಿದೆ.
ಈಗಲೂ ಲಾಬಿಈಮಧ್ಯೆ, 500 ಚದರ ಮೀಟರ್ ವಿಸ್ತೀರ್ಣ ಹಾಗೂ ಅದಕ್ಕೆ ಮೇಲ್ಪಟ್ಟ ಯೋಜನೆಗಳು ಮಾತ್ರ ಪರಿಗಣಿಸುವ ಅಂಶದ ವಿಚಾರದಲ್ಲಿ ಸರಳೀಕರಣ ಮಾಡಲು ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಿವೆ. ಸಂಪುಟದಲ್ಲಿ ಒಪ್ಪಿಗೆ ಪಡೆದು ನಿಯಮಾವಳಿ ರೂಪಿಸುತ್ತಿರುವ ಹಂತದಲ್ಲೂ ಇನ್ನೂ ಕಡಿಮೆ ವಿಸ್ತೀರ್ಣದ ಯೋಜನೆಗೂ ಒಪ್ಪಿಗೆ ಕೊಡುವಂತೆ ನಿಯಮಾವಳಿ ಸರಳೀಕರಣ ಮಾಡಿ ಎಂದು ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಕಾನೂನು ಎಲ್ಲರಿಗೂ ಒಂದೇ
ಕೇಂದ್ರ ಸರ್ಕಾರದ ಕಾಯ್ದೆ ವ್ಯಾಪ್ತಿಯ ಚೌಕಟ್ಟಿನಲ್ಲೇ ನಾವು ನಿಯಮಾವಳಿ ರೂಪಿಸಿದ್ದೇವೆ. ಕಾನೂನು ಎಂದರೆ ಎಲ್ಲರೂ ಪಾಲನೆ ಮಾಡಬೇಕು. ಒಟ್ಟಾರೆ ಗ್ರಾಹಕರ ಹಿತಾಸಕ್ತಿ ಮುಖ್ಯ, ಯಾರದೋ ನಿವೇಶನ, ಯಾವುದೋ ಜಾಗ ತೋರಿಸಿ ಗ್ರಾಹಕರಿಂದ ಹಣ ಪಡೆದು ವಂಚಿಸುವ ಅಥವಾ ಯಾವುದೇ ಸೌಲಭ್ಯಗಳಿಲ್ಲದೆ ಗುಣಮಟ್ಟ ಕಾಯ್ದುಕೊಳ್ಳದ ಯೋಜನೆಗಳ ಹಾವಳಿ ನಿಲ್ಲಲಿದೆ.
– ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮೋಸಗಾರರಿಗೆ ಕಡಿವಾಣ
ರೇರಾ ಕಾಯ್ದೆ ಪರಿಣಾಮಕಾರಿ ಅನುಷ್ಟಾನದಿಂದ ಅನಧಿಕೃತ ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್ ಕಂಪನಿ ಅಥವಾ ವೈಯಕ್ತಿಕವಾಗಿ ಅಪಾರ್ಟ್‌ಮೆಂಟ್, ವಾಣಿಜ್ಯ ಸಂಕೀರ್ಣ ನಿರ್ಮಿಸುವವರಿಗೆ ಕಡಿವಾಣ ಬೀಳಲಿದೆ. ಇದು ಅಗಲೇಬೇಕಾದ ಕಾರ್ಯ. ಇಲ್ಲದಿದ್ದರೆ, ಗ್ರಾಹಕರನ್ನು ಮೋಸ ಮಾಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿ ಅಮಾಯಕರು ಹಣ ಕಳೆದುಕೊಳ್ಳಬೇಕಾಗುತ್ತದೆ.
– ಸುರೇಶ್, ಪ್ರಧಾನ ಕಾರ್ಯದರ್ಶಿ, ಕ್ರೆಡಾಯ್ – ಎಸ್.ಲಕ್ಷ್ಮಿನಾರಾಯಣ