ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
Advertisement
ರಮಾರಾಣಿ ಶೋಧ ಸಂಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, “ದೇವರಿಗೆ ಭದ್ರತೆಯ ಆವಶ್ಯಕತೆ ಇರುವುದಿಲ್ಲ. ಆದರೆ ರತ್ನಬಿಂಬಗಳು ಅಮೂಲ್ಯವಾಗಿವೆ. ಅವುಗಳೊಂದಿಗೆ ನಮ್ಮ ಧಾರ್ಮಿಕ ಶ್ರದ್ಧೆ ಅವಿನಾಭಾವವಾಗಿದೆ. ಮುಂದಿನ ತಲೆಮಾರಿಗೆ ಧಾರ್ಮಿಕ ಶ್ರದ್ಧೆ ದಾಟಿಸಬೇಕಾಗಿರುವುದರಿಂದ ನಾವು ಈ ಬಿಂಬಗಳನ್ನು ರಕ್ಷಿಸಬೇಕು. ಎಲ್ಲರೂ ಈ ಮಹತ್ಕಾರ್ಯದಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳಬೇಕು’ ಎಂದರು.
ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಜೈನ ಧರ್ಮೀಯರ ವಿಶೇಷ ಪ್ರಾರ್ಥನೆ, ಸರ್ವ ಧರ್ಮೀಯರ ಸಹಕಾರದಿಂದ ಸಿದ್ಧಾಂತ ಬಿಂಬಗಳು ಮರಳಿ ಇಲ್ಲಿಗೆ ಬರುವಂತಾದದ್ದು ನಮ್ಮೆಲ್ಲರ ಪುಣ್ಯ. ಮೂರು ತಿಂಗಳಲ್ಲಿ ಅತ್ಯಾಧುನಿಕ ಸಿದ್ಧಾಂತ ಮಂದಿರವು ಸಿದ್ಧಗೊಳ್ಳಲಿದೆ ‘ ಎಂದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಕೆ. ಅಭಯಚಂದ್ರ ಮಾತನಾಡಿ, ಸಾವಿರ ಕಂಬ ಬಸದಿಯ ಆವರಣಕ್ಕೆ ಶಿಲಾಹಾಸು, ಅಭಿವೃದ್ಧಿ ಯೋಜನೆಗೆ ಒಂದು ಕೋಟಿ ವಿನಿಯೋಗಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಶೌಚಾಲಯ ಇತ್ಯಾದಿ ಮೂಲಸೌಕರ್ಯಗಳಿಗೆ 50 ಲಕ್ಷ ರೂ., ಕೊಂಡೆ ಬೀದಿಯ ಕಾಂಕ್ರಿಟೀಕರಣಕ್ಕೆ 15 ಲಕ್ಷ ಒದಗಿಸಲಾಗುವುದು’ ಎಂದರು. ಅಭಯಚಂದ್ರ ಹಾಗೂ ಕಾರ್ಕಳದ ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್ ತಲಾ 1 ಲಕ್ಷ ದ ದಾನವನ್ನು ಪ್ರಕಟಿಸಿದರು.
Related Articles
Advertisement
ಸಿದ್ಧಾಂತ ರತ್ನಬಿಂಬ ಮಂದಿರಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆ ಶಿಲಾನ್ಯಾಸ ನೆರವೇರಿಸಿದರು.