ತಾಲೂಕಿನ ಪೋಲಕಪಳ್ಳಿಯಲ್ಲಿ ಹಾನಿಯಾದ ಮುಂಗಾರು ಬೆಳೆಗಳಾದ ಹೆಸರು, ಉದ್ದು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಕೇಂದ್ರ ಸರಕಾರ ಕೃಷಿ ಪರಿಕರಗಳ ಮೇಲೆ ಜಿಎಸ್‌ಟಿ ಹೇರಿದೆ. ಇದು ರೈತರಿಗೆ ತುಂಬಾ ಹೊರೆಯಾಗುತ್ತದೆ. ಆದ್ದರಿಂದ ಅದು ಅನ್ವಯ ಆಗದಂತೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಮಳೆ ಅಭಾವದಿಂದಾಗಿ ಹೆಸರು,
ಉದ್ದು, ಸೋಯಾಬಿನ್ ಬೆಳೆ ಶೇ. 80ರಷ್ಟು ಹಾನಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ರೈತರಿಗೆ ಬೆಳೆ ಪರಿಹಾರ ನೀಡಬೇಕು ಮತ್ತು ಬೆಳೆ ಸಾಲ ಮನ್ನಾ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸಹಕಾರಿ ಸಂಘಗಳಿಂದ ಪಡೆದಿರುವ ಬೆಳೆ ಸಾಲ 50 ಸಾವಿರ ರೂ. ರೂ. ಮನ್ನಾ ಮಾಡಿದ್ದಾರೆ. ಅದರಂತೆ ಕೇಂದ್ರ ಸರಕಾರ ರಾಷ್ಟ್ರಿಕೃತ ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ರೈತರಿಗೆ ಬೆಳೆ ಪರಿಹಾರ ಮತ್ತು ಸಾಲ ಮನ್ನಾ ಮಾಡುವಂತೆ ಕಾಂಗ್ರೆಸ್ ಪಕ್ಷದ ಯುವ ಧುರೀಣ ರಾಹುಲ್ ಗಾಂಧಿ ಅವರು ರಾಯಚೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ನೀಡಲಾಗಿದೆ. ಅಲ್ಲದೇ ಮುಖ್ಯಮಂತ್ರಿಗಳು ಆ.13 ರಂದು ಆಳಂದ ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ರೈತರ ಪರವಾಗಿ ಮನವಿ
ಸ್ಪಂದಿಸುವುವಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಎಚ್. ಗಡಗಿಮನಿ, ತಾಪಂ ಅಧಿ ಕಾರಿ ಅನೀಲಕುಮಾರ ರಾಠೊಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ಸದಸ್ಯರಾದ ಚಂದ್ರಪ್ಪ ಮೇಲಗಿರಿ, ಅಮೃತರಾವ ಹಾಸೆಕರ, ಬಾಬುರಾವ ಬೋಯಿ, ಮಲಕಪ್ಪ ಬೀರಾಪುರ, ಬಸಲಿಂಗಯ್ಯ ಸ್ವಾಮಿ, ಧರ್ಮಣ್ಣ ವ್ಯವಸ್ಥಾಪಕರು ಇದ್ದರು.
Advertisement