Advertisement
ಹಿರಿಯ ನಿರ್ದೇಶಕ ಹಾಗೂ ಪುರಸಭೆ ನೂತನ ಸದಸ್ಯ ಚನ್ನಪ್ಪ ಕಂಠಿ ಪ್ರತಿಭಟನೆ ನಡೆಸಿದವರಾಗಿದ್ದು ಸದ್ಯ ನಡೆಯುತ್ತಿರುವ ನೌಕರರ ನೇಮಕಾತಿ ರದ್ದುಪಡಿಸುವಂತೆ ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆಹಮ್ಮಿಕೊಂಡಿದ್ದರು.
Related Articles
Advertisement
ಈವರೆಗೂ ಉತ್ತರ ನೀಡದ ಕಾರಣ ಅ. 13ರಂದು ಬ್ಯಾಂಕಿನ ಸಭಾ ಭವನದಲ್ಲಿ ನಡೆಯುವ ಸಂದರ್ಶನ ವೇಳೆ ಪ್ರತಿಭಟನೆ ನಡೆಸುವುದಾಗಿ ಅ. 12ರಂದೇ ನೇಮಕಾತಿ ಸಮಿತಿ ಕಾರ್ಯದರ್ಶಿಗೆ ಲಿಖೀತ ಮಾಹಿತಿ ನೀಡಿದ್ದೆ. ಅದರಂತೆ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನೇಮಕಾತಿ ಪ್ರಕ್ರಿಯೆಗಾಗಿ ನಡೆದ ಲಿಖೀತ ಪರೀಕ್ಷೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹೆಚ್ಚು ಅಂಕ ಹಾಕಿಸಲಾಗಿದೆ. ಇಂಥವರಿಂದ 25-30 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ಪಟ್ಟಣದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಮೊದಲು ಇಲ್ಲಿ ನೇಮಕಾತಿ ಆಮಿಷ ತೋರಿಸಿ ತಾತ್ಕಾಲಿಕವಾಗಿ ಕೆಲಸಕ್ಕಿಟ್ಟುಕೊಂಡಿದ್ದ ನೌಕರರನ್ನು ಕೈಬಿಡಲಾಗಿದೆ. ಇದರಿಂದ ಬ್ಯಾಂಕಿನ ನಿರ್ದೇಶಕರ ಮಾನ ಸಾರ್ವಜನಿಕವಾಗಿ ಹರಾಜಾದಂತಾಗಿದೆ. ಹೀಗಾಗಿ ನಿರ್ದೇಶಕರ ಮಾನ ಕಾಪಾಡಬೇಕು ಎನ್ನುವ ಕಳಕಳಿಯಿಂದ ಈ ಪ್ರತಿಭಟನೆ ನಡೆಸಬೇಕಾಯಿತು ಎಂದು ತಿಳಿಸಿದರು.
ಬ್ಯಾಂಕ್ ಎದುರು ನಡೆದ ಈ ಘಟನೆ ಹೆಚ್ಚಿನ ಜನರು ಸೇರುವಂತೆ ಮಾಡಿ ಸಂದರ್ಶನ ಪ್ರಕ್ರಿಯೆಗೆ ತೊಡಕಾಗುವ ಲಕ್ಷಣ ಕಂಡು ಬಂತು. ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜನರನ್ನು ನಿಯಂತ್ರಿಸಲಾಯಿತು. ವಿಷಯ ತಿಳಿದು ಸ್ಥಳಕ್ಕೆಆಗಮಿಸಿದ ಮಾಧ್ಯಮದವರನ್ನು ಬ್ಯಾಂಕಿನ ಒಳಗೆ ಬಿಡಲಿಲ್ಲ. ಈ ಬಗ್ಗೆ ಮಾಧ್ಯಮದವರು ಆಕ್ರೋಶ ವ್ಯಕ್ತಪಡಿಸಿದಾಗ ಮಣಿದ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್ ಅವರು ಈಗ ಸಂದರ್ಶನ ನಡೆಯುತ್ತಿದ್ದು ಅದು ಮುಗಿದ ಮೇಲೆ ನಾವೇ ಮಾಧ್ಯಮದವರನ್ನು ಕರೆಸಿ ಎಲ್ಲ ಮಾಹಿತಿ ನೀಡುತ್ತೇವೆ ಎಂದು ಮನವಿ ಮಾಡಿದರು.