Advertisement

ಕಲ್ಲಿದ್ದಲಿಗೆ ಪರ್ಯಾಯ ಉರುವಲಿಗೆ ಬೇಡಿಕೆ

06:10 AM Dec 01, 2018 | |

ಬೆಂಗಳೂರು: ಅರಣ್ಯ ಹಾಗೂ ಕೃಷಿ ತ್ಯಾಜ್ಯದಿಂದಾಗಿ ತಯಾರಿಸುತ್ತಿರುವ ಜೈವಿಕ ಇಂಧನ ಉರುವಲು (ಬಯೋಮಾಸ್‌ ಬ್ರಿಕೆಟ್ಸ್‌)ಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಕರ್ನಾಟಕ ಮೂಲದ ಅಲೆಕ್ಸಿಸ್‌ ಸಿಸ್ಟಮ್ಸ್‌ ಸಂಸ್ಥೆ ಜೈವಿಕ ಇಂಧನ ಉಂಡೆಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

Advertisement

ಕಲ್ಲಿದ್ದಲು ಸುಡುವುದರಿಂದ ಬರುವ ಕಪ್ಪು ಹೊಗೆ ಹೆಚ್ಚಿನ ಮಾಲಿನ್ಯ ಸೃಷ್ಟಿಸುತ್ತದೆ. ಆ ಹಿನ್ನೆಲೆಯಲ್ಲಿ ದೆಹಲಿ ಸೇರಿ ಹಲವು ಪ್ರಮುಖ ನಗರಗಳ ಕಾರ್ಖಾನೆಗಳಲ್ಲಿ ಕಲ್ಲಿದ್ದಲು ಸುಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಆ ಹಿನ್ನೆಲೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಇಂಧನಗಳ ಬಳಕೆಗೆ ಕಾರ್ಖಾನೆಗಳು ಮುಂದಾಗುತ್ತಿದ್ದು, ಜೈವಿಕ ಇಂಧನ ಉಂಡೆಗಳ ಮಾರುಕಟ್ಟೆ ವಿಸ್ತರಿಸುತ್ತಿದೆ.

ಹೊಲಗಳಲ್ಲಿನ ತ್ಯಾಜ್ಯಕ್ಕೆ ರೈತರು ಬೆಂಕಿಯಿಡುತ್ತಾರೆ. ಇದರಿಂದಾಗಿ ಮತ್ತೆ ಮಾಲಿನ್ಯ ಉಂಟಾಗುತ್ತದೆ. ಆ ಹಿನ್ನೆಲೆಯಲ್ಲಿ ಜೈವಿನ ಇಂಧನ ಉಂಡೆಗಳ ಉತ್ಪಾದನೆಗಾಗಿ ಅಲೆಕ್ಸಿಸ್‌ ಸಿಸ್ಟಮ್ಸ್‌ ಸಂಸ್ಥೆಯು ಅರಣ್ಯ ಹಾಗೂ ಕೃಷಿ ಹೊಲಗಳಲ್ಲಿನ ತ್ಯಾಜ್ಯವನ್ನು ರೈತರಿಂದ ಖರೀದಿಸುತ್ತದೆ. ಹೀಗೆ ಖರೀದಿಸಿದ ತ್ಯಾಜ್ಯವನ್ನು ಬಳಕೆಯಾಗುವ ಹಾಗೂ ಬಳಕೆಯಾಗದ ತ್ಯಾಜ್ಯವೆಂದು ವಿಂಗಡಿಸಿ, ಬಳಕೆಯಾಗುವ ತ್ಯಾಜ್ಯವನ್ನು 5 ರಿಂದ 8 ಎಂಎಂ ಅಳತೆಗೆ ಕತ್ತರಿಸಲಾಗುತ್ತದೆ.

ಕತ್ತರಿಸಿದ ತ್ಯಾಜ್ಯದಲ್ಲಿನ ತೇವಾಂಶವನ್ನು ವಿಶೇಷ ಯಂತ್ರಗಳ ಮೂಲಕ ಕಡಿಮೆ ಮಾಡಲಾಗುತ್ತದೆ. ಬಳಿಕ ತ್ಯಾಜ್ಯ
ಘನೀಕರಣವಾಗದಂತೆ ಹಾಗೂ ಮತ್ತೆ ತ್ಯಾಜ್ಯದಲ್ಲಿ ತೇವಾಂಶ ಕಂಡು ಬರದಂತೆ ಶಾಖ ನೀಡಲಾಗುತ್ತದೆ.

ಕೊನೆಗೆ ಇಂಧನ ಉಂಡೆಗೆ ತಯಾರಿಕೆಗೆ ಅಗತ್ಯವಾದ ಕೆಲವು ಜೈವಿಕ ಪದಾರ್ಥಗಳನ್ನು ಹಾಗೂ ತ್ಯಾಜ್ಯವನ್ನು ಮಿಕ್ಸರ್‌ನಲ್ಲಿ
ಹಾಕಲಾಗುತ್ತದೆ. ಮಿಕ್ಸಿಂಗ್‌ ಆದ ಬಳಿಕ ತ್ಯಾಜ್ಯವು ಘನ ರೂಪ ಪಡೆದುಕೊಳ್ಳಲಿದ್ದು, ಕಟ್ಟರ್‌ ಯಂತ್ರದ ಮೂಲಕ ಅಗತ್ಯ
ಅಳತೆಗೆ ಉಂಡೆಗಳನ್ನು ಕತ್ತರಿಸಲಾಗುತ್ತದೆ. ಬಳಿಕ 30-40 ಕೆ.ಜಿ.ಯಂತೆ ಉಂಡೆಗಳನ್ನು ಪ್ಯಾಕಿಂಗ್‌ ಮಾಡಲಾಗುತ್ತದೆ.
ಹೀಗೆ ಪ್ಯಾಕ್‌ ಮಾಡಿದ ಇಂಧನ ಉರುವಲು ಕಾರ್ಖಾನೆಯವರು ಖರೀದಿಸುತ್ತಾರೆ. ಸಿಮೆಂಟ್‌ ತಯಾರಿಕೆ, ಗಾರ್ಮೇಂಟ್ಸ್‌ ಸೇರಿ ಬಾಯ್ಲರ್‌ಗಳನ್ನು ಬಳಕೆ ಮಾಡುವಂತಹ ಎಲ್ಲ ಕಾರ್ಖಾನೆಗಳಲ್ಲಿ ಜೈವಿಕ ಇಂಧನ ಉರುವಲು ಅನುಕೂಲವಾಗಲಿವೆ. ಇದರೊಂದಿಗೆ ಕಲ್ಲಿದ್ದಲಿಗಿಂತಲೂ ಕಡಿಮೆ ಬೆಲೆಗೆ ಈ ಉರುವಲು ಲಭ್ಯವಾಗಲಿವೆ ಎಂದು ಸಂಸ್ಥೆಯ ನಿರ್ದೇಶಕ ಸಮಿತ್‌ ತಂಗಾ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next