Advertisement

ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಧರಣಿ

06:27 PM Dec 16, 2020 | Suhan S |

ಹರಿಹರ: ಬಾಕಿ ವೇತನ ನೀಡಲು ಆಗ್ರಹಿಸಿ ಇಲ್ಲಿನ ಸರ್ಕಾರಿ ಗುತ್ತಿಗೆ ಆಧಾರಿತ ಕಾರ್ಮಿಕರು ಮಂಗಳವಾರ ಸೇವೆ ಸ್ಥಗಿತಗೊಳಿಸಿ ಧರಣಿ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಗುತ್ತಿಗೆ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಎಚ್‌.ಕೆ. ಕೊಟ್ರಪ್ಪ, ಆಸ್ಪತ್ರೆಯ ಸಂಪೂರ್ಣ ಸ್ವತ್ಛತೆ ಸೇರಿದಂತೆ ನೈರ್ಮಲ್ಯಕೆಲಸಗಳನ್ನು 25 ಗುತ್ತಿಗೆ ಕಾರ್ಮಿಕರು ಕಳೆದ 15 ವರ್ಷಗಳಿಂದ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಸಂಬಳನೀಡುವ ಟೆಂಡರ್‌ ಪ್ರಕ್ರಿಯೆಯನ್ನು ವರ್ಷಕ್ಕೊಮ್ಮೆನಡೆಸಲಾಗುತ್ತದೆ. ಆದರೆ ಟೆಂಡರ್‌ ಪ್ರಕ್ರಿಯೆಯನ್ನು ಆರೋಗ್ಯ ಇಲಾಖೆ ಸೂಕ್ತ ಸಮಯದಲ್ಲಿ ನಡೆಸುವುದಿಲ್ಲ. ಗುತ್ತಿಗೆದಾರರಿಗೆ ಸಮಯಕ್ಕೆಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ. ಇದೆಲ್ಲದರಪರಿಣಾಮವಾಗಿ ತಿಂಗಳಿಗೊಮ್ಮೆ ಕಾರ್ಮಿಕರಿಗೆವೇತನ ಪಾವತಿಯಾಗುತ್ತಿಲ್ಲ. ಕಳೆದ 6 ತಿಂಗಳಿನಿಂದ ಸಂಬಳ ಸಿಗದೆ ಕಾರ್ಮಿಕರ ಕುಟುಂಬಗಳು ಸಾಲದಸುಳಿಗೆ ಸಿಲುಕುತ್ತಿವೆ. ಪ್ರತಿ ಬಾರಿ ಸಂಬಳ ಪಡೆಯಲುಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದರು.

ಸಂಘದ ಅಧ್ಯಕ್ಷ ಕೆ. ಪಂಚಾಕ್ಷರಿ ಮಾತನಾಡಿ, ಕೋವಿಡ್‌-19 ಅವಧಿಯಲ್ಲಿ ಎದೆಗುಂದದೆಈ ಕಾರ್ಮಿಕರು ಸೇವೆ ನೀಡಿದ್ದಾರೆ. ಇವರಾರು ಸ್ಥಿತಿವಂತರಲ್ಲ. ನೀಡುವ ಅಲ್ಪ ಸಂಬಳವೇ ಇವರಕುಟುಂಬದ ಆಧಾರವಾಗಿದೆ. ಸಂಬಳಕ್ಕಾಗಿ ಪ್ರತಿ ಬಾರಿ ಪ್ರತಿಭಟನೆ ಮಾಡಬೇಕಿದೆ. ಪ್ರತಿ ತಿಂಗಳು ಸಂಬಳ ದೊರಕುವಂತೆ ವ್ಯವಸ್ಥೆ ಮಾಡಬೇಕೆಂದರು.

ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಬಿ.ಪಿ. ಹರೀಶ್‌ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ಹನಗವಾಡಿಯವರು ಡಿಎಚ್‌ಒಗೆ ದೂರವಾಣಿ ಕರೆಮಾಡಿ ಕರೆಸಿಕೊಂಡರು. ಜೀವದ ಹಂಗು ತೊರೆದುಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನಿಗದಿತವಾಗಿತಿಂಗಳಿಗೊಮ್ಮೆ ಸಂಬಳ ದೊರಕುವಂತೆ ವ್ಯವಸ್ಥೆಮಾಡುವಂತೆ ತಾಕೀತು ಮಾಡಿದರು.

ಆಗ ಡಿಎಚ್‌ಒ, ಗುತ್ತಿಗೆದಾರ ಮೈಸೂರಿನ ನಾಗರಾಜ್‌ ಎಂಬುವರಿಗೆ ಕರೆ ಮಾಡಿ, ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡುವಂತೆ ಸೂಚಿಸಿದರು. ಪ್ರತಿಕ್ರಿಯಿಸಿದನಾಗರಾಜ್‌ ಮಾತನಾಡಿ, ಇಲಾಖೆಯಿಂದಕೊಡಬೇಕಾದ ಹಣ ಬಿಡುಗಡೆಯಾಗದ್ದರಿಂದ ಸಂಬಳ ಕೊಡಲು ಆಗುತ್ತಿಲ್ಲ, ಹಣ ಬಿಡುಗಡೆ ಮಾಡಿರಿ ಎಂದರು.

Advertisement

ಇದರಿಂದ ಕೆರಳಿದ ಕಾರ್ಮಿಕರು, ಪ್ರತಿ ಬಾರಿ ಗುತ್ತಿಗೆದಾರರು ಇಲಾಖೆ ಮೇಲೆ, ಇಲಾಖೆಯವರುಗುತ್ತಿಗೆದಾರರ ಮೇಲೆ ಸಬೂಬು ಹೇಳುತ್ತಿದ್ದಾರೆಂದುದೂರಿದರು. ಕೊನೆಗೆ ಸದ್ಯಕ್ಕೆ ಎರಡು ತಿಂಗಳ ಸಂಬಳನೀಡುತ್ತೇನೆ, ಉಳಿದ ಸಂಬಳ ಇಲಾಖೆಯಿಂದಅನುದಾನ ಬಿಡುಗಡೆಯಾದಾಗ ನೀಡುತ್ತೇನೆ ಎಂದುಗುತ್ತಿಗೆದಾರ ಲಿಖೀತ ಹೇಳಿಕೆ ನೀಡಿದಾಗ ಪ್ರತಿಭಟನೆ ಅಂತ್ಯಗೊಂಡಿತು. ಸಂಘದ ಕಾರ್ಯದರ್ಶಿ ಎನ್‌.ಇ.ಸುರೇಶ್‌ಸ್ವಾಮಿ, ಆಸ್ಪತ್ರೆ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ| ಎಲ್‌. ಹನುಮ ನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next