Advertisement
ಪಾತಪಾಳ್ಯ ಹೋಬಳಿ ವ್ಯಾಪ್ತಿಯ ಸೋಮನಾಥಪುರ ಗ್ರಾಪಂ ವ್ಯಾಪ್ತಿಗೆ 16 ಹಳ್ಳಿಗಳು ಬರುತ್ತದೆ. ಕೇಂದ್ರ ಸ್ಥಾನದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲದೆ 8 ಕಿ.ಮೀ ದೂರದ ಶಿವಪುರ(ಯರ್ರಗುಡಿ), 6 ಕಿ.ಮೀ. ದೂರದ ಪಾತಪಾಳ್ಯ, 12 ಕಿ.ಮೀ. ದೂರದ ಚೇಳೂರಿಗೆ ಹೋಗಬೇಕಾಗಿದೆ. ದೇವಾರ‌್ಲ ಪಲ್ಲಿ, ದಿಗವ ಹಾಗೂ ಎಗವನೆಟ್ಟ ಕುಂಟ್ಲ ಪಲ್ಲಿ, ದೊಡ್ಡಿಪಲ್ಲಿ, ಮರಿಮಾಕಲಪಲ್ಲಿ ಜನರು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದು, ಬಸ್ ಸೌಕರ್ಯವಿಲ್ಲದೆ ಕಾಲ್ನಡಿಗೆಯಲ್ಲಿ ಸೋಮನಾಥಪುಕ್ಕೆ ಬಂದು ಬಸ್ ಹತ್ತ ಬೇಕು. ಸೋಮನಾಥಪುದಲ್ಲಿ ಆಸ್ಪತ್ರೆ ತೆರೆ ದರೆ ನಕ್ಕಲಪಲ್ಲಿ, ಸೀಗಲಪಲ್ಲಿ, ಚೀಮನ್ನ ಗಾರಪಲ್ಲಿ, ಗೊಟ್ಲಪಲ್ಲಿ, ಕುರ್ರಪಲ್ಲಿ, ಎಂ.ಎಂ. ಪಲ್ಲಿ, ಚಿನ್ನಗಾನಪಲ್ಲಿ, ಗಾಧಿ ವಾಂಡ್ಲಪಲ್ಲಿ, ಕುರುಬರಹಳ್ಳಿ ಮುಂತಾದ ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ. ವ್ಯವ ಸಾಯ ಹಾಗೂ ಕೂಲಿ ಮಾಡಿ ಜೀವನ ನಡೆ ಸುವ ಇಲ್ಲಿನ ಜನ ಆಸ್ಪತ್ರೆಗೆ ಹೋಗಬೇಕಾ ದರೆ ಒಂದು ದಿನವೆಲ್ಲಾ ಹಾಳಾಗುತ್ತದೆ.
Related Articles
Advertisement
ಕೇಂದ್ರ ಸ್ಥಾನದಲ್ಲಿ ಉಪ ಆರೋಗ್ಯ ಕೇಂದ್ರ ತೆರೆದರೆ, ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಹಾಗೂ ದೂರದ ಊರುಗಳಿಗೆ ಹೋಗುವುದು ತಪ್ಪುತ್ತದೆ. –ಬಿ.ವಿ.ಪಾಪಿರೆಡ್ಡಿ, ನಗದು ಗುಮಾಸ್ತ, ಎಸ್‌ಎಸ್‌ಎನ್ ಬ್ಯಾಂಕ್, ಸೋಮನಾಥಪುರ