ಚಾಮರಾಜನಗರ: ಹಾಲಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಭಾಗ್ಯ ಯೋಜನೆ, ಪಿಂಚಣಿ ಸೌಲಭ್ಯ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿವೃತ್ತ ನೌಕರರಿಗೂ ವಿಸ್ತರಿಸಲು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಬೆಂಗಳೂರು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಜೆ.ಸಿ.ಮಂಜುನಾಥ ಹೇಳಿದರು. ನಗರದ ಜೆ.ಎಚ್.ಪಟೇಲ್‌ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆಯ 12ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ನೌಕರರ ನಿವೃತ್ತ ನೌಕರರ ಸಂಘ ಸ್ಥಾಪನೆಯಾಗಿ 50 ವರ್ಷಗಳು ಕಳೆದಿದೆ. ಹಿಂದಿನ ಅಧ್ಯಕ್ಷರು ಸಂಘದ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದು, ಸಂಘ ಕುಂಠಿತವಾಗಿತ್ತು. ಚುನಾವಣೆ ಪ್ರಕ್ರಿಯ ಮೂಲಕ ಡಾ.ಎಲ್.ಭೈರಪ್ಪ ಸಂಘದ ನೂತನ ಅಧ್ಯಕ್ಷರಾದ ಮೇಲೆ ಸಂಘದ ಚುರುಕಿನ ಚಟುವಟಿಕೆ ಆರಂಭಗೊಂಡಿದ್ದು, ನಿವೃತ್ತ ನೌಕರರಿಗೆ ಬೇರೆಬೇರೆಗಳಲ್ಲಿ ಜಾರಿಯಲ್ಲಿರುವ ಆರೋಗ್ಯ ಭಾಗ್ಯ ಯೋಜನೆ, ಪಿಂಚಣೆ ಸೌಲಭ್ಯ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳು, ಅಧಿಕಾರಿಗಳಲ್ಲಿ ಮನವಿ ಸಲ್ಲಿಸಲಾಗಿದೆ ಎಂದರು.
ನಿವೃತ್ತ ನೌಕರರಿಗೆ ಬಸ್ ಪ್ರಯಾಣದರದಲ್ಲಿ ರಿಯಾಯಿತಿ, ನಿವೇಶನ ಖರೀದಿಗೆ ಹಣಕಾಸಿನ ನೆರವು ನೀಡಬೇಕು. ಶವಸಂಸ್ಕಾರ ಧನಸಹಾಯ, ಆಸ್ತಿ ಖರೀದಿಗೆ ಸಾಲಸೌಲಭ್ಯ, ಮಕ್ಕಳ ಶಿಕ್ಷಣ ಶಿಕ್ಷಣ ಬಡ್ಡಿ ರಹಿತ ಸಾಲಸೌಲಭ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಿವೃತ್ತ ನೌಕರಿಗೆ ಪತ್ಯೇಕ ಕೌಂಟರ್ ತೆರೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.
ಸಂಘ ಸಂಘಟನೆ ಬಹಳ ಮುಖ್ಯ. ಆದ್ದರಿಂದ ಕೇಂದ್ರ ಸಂಘವನ್ನು ಬಲ ಪಡಿಸುವ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾ ಸಂಘ ಬೆನ್ನೆಲುಬಾಗಿ ನಿಲ್ಲಬೇಕು. ಸಂಘದ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ನಿವೃತ್ತ ನೌಕರರ ಗುರುತಿಸಿ ಸನ್ಮಾನ ಮಾಡುತ್ತಿರುವುದು ಒಂದು ಒಳ್ಳೆಯ ಕೆಲಸವಾಗಿದೆ. ಏಕೆಂದರೆ ಅನೇಕ ಇಲಾಖೆಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದ ನಿವೃತ್ತ ನೌಕರಿಗೆ ಸನ್ಮಾನ ಮಾಡುವುದಿಲ್ಲ. ನಮ್ಮ ಸಂಘದ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ನಿವೃತ್ತ ನೌಕರಿಗೆ ಆರೋಗ್ಯ ಯೋಜನೆ, ನಿವೃತ್ತ ನೌಕರರ ಭವನ ನಿರ್ಮಾಣಕ್ಕೆ ನಿವೇಶನ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗೇಶ್ ಮಾತನಾಡಿ, ನಿವೃತ್ತ ನೌಕರರ ಕಷ್ಠ. ಸುಖ ಭಾಗಿಯಾಗುವುದು, ನಿವೃತ್ತ ನೌಕರರ ಸಮಸ್ಯೆ ಪರಿಹರಿಸಿಕೊಡುವುದು ಸಂಘದ ಸದಸ್ಯರ ಸದಾ ಸೇವೆ ಮಾಡುವುದು ಸಂಘದ ಉದ್ದೇಶವಾಗಿದೆ ಎಂದು ಹೇಳಿದರು. ಸಂಘ ಒಂದು ಶಕ್ತಿ ಅದರ ಮೂಲಕ ಸಂವಿಧಾನ ಬದ್ಧ ನಿವೃತ್ತ ನೌಕರರ ಸೌಲಭ್ಯಗಳನ್ನು ಹೋರಾಟ ಮಾಡುವುದರ ಮೂಲಕ ಪಡೆದುಕೊಳ್ಳಲಾಗವುದು. ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡಬೇಕು. ಕುಟುಂಬದ ಪಿಂಚಣಿ ಶೇ. 50 ರಷ್ಟು ಹೆಚ್ಚು ಮಾಡಿಸಬೇಕು ಎಂದು ಸಂಘಕ್ಕೆ ಮನವಿ ಮಾಡಿದರು. ನಿವೃತ್ತ ನೌಕಕರು ಸಂಘ ಸದಸ್ಯತ್ವ ಪಡೆದುಕೊಂಡು ಸಂಘ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸನ್ಮಾನ, ಶ್ರದ್ಧಾಂಜಲಿ: ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು ಹಾಗೂ ಕಳೆದ ಸಾಲಿನಲ್ಲಿ ಅಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ವರದಿಯನ್ನು ಕಾರ್ಯದರ್ಶಿ ರಾಜು ಮಂಡಿಸಿದರು. ಸಂಘದ ಲೆಕ್ಕ ಪರಿಶೋಧನೆ ವರದಿಯನ್ನು ಖಜಾಂಚಿ ಎಂ.ಶಿವಣ್ಣ ಮಂಡಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಣ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಮುನಿದೇವರಾಜ್, ಯಳಂದೂರು ತಾಲೂಕು ಅಧ್ಯಕ್ಷ ವೈ.ಎನ್.ನಾಗರಾಜಪ್ಪ, ಸಂಘದ ಉಪಾಧ್ಯಕ್ಷಗಳಾದ ಹೊನ್ನೂರಯ್ಯ, ಎಲ್.ದೇವಣ್ಣ, ಲೆಕ್ಕ ಪರಿಶೋಧಕ ಬಿ.ರಾಮು, ಸಂಘಟನಾ ಕಾರ್ಯದರ್ಶಿ ಎ.ಸಿದ್ದಯ್ಯ, ನಿರ್ದೇಶಕರಾದ ಕೆ.ಸೋಮಣ್ಣ, ಎಚ್.ಬಿ.ಕೃಷ್ಣಸ್ವಾಮಿನಾಯಕ, ಎಂ.ಎ.ಶ್ರೀಕಂಠಯ್ಯ, ಕೆ.ಸಿ.ಮರಿಸ್ವಾಮಿ, ಎನ್.ಸುಬ್ರಹ್ಮಣ್ಯ, ಎ.ಪಿ.ಚಂದ್ರಶೇಖರ್, ರಾಜ್‌ಗೊàಪಾಲ್, ಎ.ಸುಂದರ್, ಸಿ.ಎಸ್.ಜಗದೀಶ್ ಇತರರು ಇದ್ದರು.