ರಾಯಚೂರು: ವೈಟಿಪಿಎಸ್‌ಗೆ ಭೂಮಿ ಕೊಟ್ಟವರ ಸಂಕಷ್ಟ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ದಿನೇದಿನೆ ತಾಳ್ಮೆ ಕಳೆದುಕೊಳ್ಳುತ್ತಿರುವ ಭೂ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನವಿ ಸಲ್ಲಿಸಿದರೆ, ಅಧಿಕಾರಿಗಳು ಅದಕ್ಕೂ ಸ್ವೀಕೃತಿ ಮೊಹರು ಒತ್ತಿ ಹಿಂದಿರುಗಿಸಿದ್ದಾರೆ!
ಸಮೀಪದ ಯರಮರಸ್ ಥರ್ಮಲ್ ಪವರ್ ಸ್ಟೇಶನ್ ಸ್ಥಾಪನೆಗೆ ಸುತ್ತಲಿನ ಗ್ರಾಮಗಳಾದ ಏಗನೂರು, ವಡೂÉರು,
ಚಿಕ್ಕಸುಗೂರು, ಯರಮರಸ್, ಕುಕನೂರು ಸೇರಿ ಅನೇಕ ಗ್ರಾಮಗಳಿಂದ 1100ಕ್ಕೂ ಅಧಿಕ ಎಕರೆ ಜಮೀನು
ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ವೇಳೆ ಜಿಲ್ಲಾಡಳಿತ ಪರಿಹಾರದ ಜತೆಗೆ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ, ವೈಟಿಪಿಎಸ್‌ನ ಬಹುತೇಕ ಕೆಲಸ ಮುಗಿದಿದ್ದು, ಉತ್ಪಾದನೆ ಆರಂಭಿಸಿದೆ. ಸಂತ್ರಸ್ತರಲ್ಲಿ ಕೆಲವರಿಗೆ ಮಾತ್ರ ಉದ್ಯೋಗ ಸಿಕ್ಕಿದ್ದು, ಸಾಕಷ್ಟು ಜನರಿಗೆ ಉದ್ಯೋಗ ನೀಡಿಲ್ಲ.
ರೈಲ್ವೆ ಟ್ರಾಕ್ ನಿರ್ಮಿಸಲು ಚಿಕ್ಕಸುಗೂರು ಗ್ರಾಮದ ರಾಘವೇಂದ್ರ ಅವರ ಒಂದು ಎಕರೆ ಜಮೀನು ಕೂಡ ಸ್ವಾಧಿಧೀನ ಪಡಿಸಿಕೊಳ್ಳಲಾಗಿದೆ. ಇದರಿಂದ ಕುಟುಂಬ ಸದಸ್ಯರು ಜೀವನೋಪಾಯಕ್ಕೆ ಕೂಲಿ ಮಾಡಬೇಕಾದ ಸ್ಥಿತಿ ಬಂದಿದೆ.
ಉದ್ಯೋಗ ನೀಡುವಂತೆ ಸಂಬಂಧಿಸಿದ ಎಲ್ಲರಿಗೂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆಲಸ
ಕೊಡದಿದ್ದರೆ ಆತ್ಮಹತ್ಯೆ ಮಾಡಕೊಳ್ಳುವುದಾಗಿ ಕೆಪಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ, ಅಧಿಕಾರಿಗಳು ಅದಕ್ಕೆ ಸ್ವೀಕೃತಿ ಪತ್ರ ನೀಡಿ ಕಳುಹಿಸಿದ್ದಾರೆ. ಸೌಜನ್ಯಕ್ಕಾದರೂ ಅಧಿಕಾರಿಗಳು ಸ್ಪಂದಿಸುವ ಔದಾರ್ಯ ತೋರಿಲ್ಲ. ಇದರಿಂದ ನೊಂದಿರುವ ರಾಘವೇಂದ್ರನ ಕುಟುಂಬ ಸದಸ್ಯರು ತಮಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆಯೊಂದೇ ದಾರಿ ಎಂದು
ಅಲವತ್ತುಕೊಳ್ಳುತ್ತಿದ್ದಾರೆ.