Advertisement

ರಸ್ತೆ ಬದಿ ಸಸಿ ನೆಡಲು ಮನವಿ

12:57 PM Dec 31, 2019 | Team Udayavani |

ಚಿಕ್ಕಮಗಳೂರು: ಸುಪ್ರೀಂ ಕೋರ್ಟ್‌ ಆದೇಶ ಪರಿಪಾಲನೆ ಮಾಡುವಲ್ಲಿ ಖಾಸಗಿ ಸಂಸ್ಥೆಗಳು ವಿಫಲವಾಗಿದ್ದು, ಆದೇಶ ಪಾಲನೆ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅಖೀಲ ಭಾರತ ಎರಡನೇ ಸ್ವಾತಂತ್ರ್ಯ ಹೋರಾಟಗಾರರ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸುಂದರಗೌಡ ಒತ್ತಾಯಿಸಿದರು.

Advertisement

ಈ ಕುರಿತು ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 173ರಲ್ಲಿ 2318 ಮರಗಳನ್ನು ಕಡಿಯಲು ಉದ್ದೇಶಿಸಿದ್ದು, ಸುಪ್ರೀಂ ಕೋರ್ಟ್‌ ಆದೇಶದಂತೆ ಒಂದು ಮರ ಕಡಿಯಲು ಹತ್ತು ಮರಗಳನ್ನು ನೆಡಬೇಕೆಂಬ ಆದೇಶವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮುಂದಿನ ಐದು ವರ್ಷದಲ್ಲಿ ಸಾರ್ವಜನಿಕರ ಅಭಿವೃದ್ಧಿಯ ನೆಪದಲ್ಲಿ 22 ಲಕ್ಷ ಮರಗಳನ್ನು ಕಡಿತಲೆ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಶೇ.33 ರಷ್ಟು ಇರುವ ಕಾಡನ್ನು ಶೇ.18 ರಷ್ಟು ಉಳಿಸಿ ವನ್ಯ ಜೀವಿಗಳನ್ನು ನಾಶ ಮಾಡುವ ಆಲೋಚನೆ ಇದ್ದಂತಿದೆ ಎಂದು ದೂರಿದ್ದಾರೆ.

ನಾವು ಮಾಡುವ ಎಲ್ಲಾ ಅಭಿವೃದ್ಧಿ ಕೆಲಸಗಳು ಮುಂದಿನ ಜನಾಂಗಕ್ಕೆ ವಿನಾಶಕಾರಿಯಾಗಬಾರದು. ಈಗಾಗಲೇ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಹೇಳಿಕೆಯಲ್ಲಿ 22 ಸಾವಿರ ಗಿಡಗಳನ್ನು ರಸ್ತೆ ಬದಿಯಲ್ಲಿ ನೆಡಲಾಗುವುದು ಎಂದು ಭರವಸೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವಂತೆ ಮನವಿ ಮಾಡಿದ್ದಾರೆ. ಸಮಿತಿಯ ಮುಖಂಡ ಗಂಗಾಧರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next