Advertisement

ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಲು ಮನವಿ

06:11 AM Jan 19, 2019 | Team Udayavani |

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ವಿದ್ಯಾದಾನ ಮಾಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ದೇಶದ ಅತ್ಯುನ್ನತ ಗೌರವವಾಗಿರುವ “ಭಾರತರತ್ನ’ ನೀಡುವ ಕುರಿತು ಸರ್ಕಾರ ಶೀಘ್ರವೇ ನಿರ್ಣಯ ಕೈಗೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಆರ್‌.ಶೆಟ್ಟಿ ಮನವಿ ಮಾಡಿದ್ದಾರೆ.

Advertisement

ಅನ್ನದಾನ ಹಾಗೂ ವಿದ್ಯಾದಾನಗಳನ್ನು ಸ್ವಾರ್ಥರತವಾಗಿ ಹೇಗೆ ಮಾಡಬೇಕು ಎಂದು ಜಗತ್ತಿಗೆ ತೋರಿಸಿದ ಮಹನೀಯರು ಸಿದ್ಧಗಂಗಾ ಶ್ರೀಗಳು. ಅಂತಹ ಮಹಾನುಭಾವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡುವುದು ಸೂಕ್ತ. ಈ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.

ಈ ಹಿಂದೆ ನಾನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ತುಮಕೂರಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿ ಎಂದು ಸ್ನಾತಕೋತ್ತರ ಪದವಿ ಶಿಕ್ಷಣದ ಸ್ನಾತಕೋತ್ತರ ಕೇಂದ್ರವನ್ನು ತುಮಕೂರಿನಲ್ಲಿ ತೆರೆಯುವ ಉದ್ದೇಶದಿಂದ ಸಿದ್ಧಗಂಗಾ ಶ್ರೀಗಳ ನೆರವು ಕೋರಿದ್ದೆ. ಕೂಡಲೇ ತಮ್ಮದೇ ಕಾಲೇಜಿನಲ್ಲಿ ಸ್ಥಳಾವಕಾಶ ಮಾಡಿಕೊಟ್ಟು ಸ್ನಾತಕೋತ್ತರ ಕೇಂದ್ರ ಆರಂಭಕ್ಕೆ ನೆರವು ನೀಡಿದರು ಎಂದು ಸ್ಮರಿಸಿದ್ದಾರೆ. ಶ್ರೀಗಳ ಆರೋಗ್ಯ ಶೀಘ್ರ ಚೇತರಿಕೆ ಕಾಣಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next