Advertisement

ಠೇವಣಿ ಹಣ ವಾಪಸ್‌ ನೀಡುವಂತೆ ಆಗ್ರಹ

02:12 PM Nov 26, 2019 | Suhan S |

ಬೆಳಗಾವಿ: ಸಮೃದ್ಧಿ ಜೀವನ ಮಲ್ಟಿ ಸ್ಟೇಟ್‌, ಮಲ್ಟಿ ಪರ್ಪಸ್‌ ಕೋ ಆಪ್‌ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಹಣ ಮರಳಿಸದೇ ವಂಚನೆ ಮಾಡಿದ್ದು, ಹೀಗಾಗಿ ಈ ಸೊಸೈಟಿ ವಿರುದ್ಧ ಕ್ರಮ ಕೈಗೊಂಡು ಗ್ರಾಹಕರ ಹಣ ವಾಪಸ್ಸು ನೀಡಬೇಕು ಎಂದು ಆಗ್ರಹಿಸಿ ಠೇವಣಿದಾರರು, ಏಜೆಂಟರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಮಹಾರಾಷ್ಟ್ರದಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಸೊಸೈಟಿ ದೇಶದ 17 ಕಡೆಗಳಲ್ಲಿ 17 ಶಾಖೆಗಳನ್ನುತೆರೆದಿದೆ. 2009ರಿಂದ 2017ರ ಅವಧಿಯಲ್ಲಿ ಕರ್ನಾಟಕದಲ್ಲಿ 4 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯ ಗೋಕಾಕ, ಸವದತ್ತಿ, ಬೈಲಹೊಂಗಲ,

ರಾಮದುರ್ಗ ತಾಲೂಕುಗಳಲ್ಲಿ 95 ಕೋಟಿಗಿಂತಲೂಹೆಚ್ಚು ಹಣವನ್ನು ಗ್ರಾಹಕರು ಈ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದರು. ಕೆಲ ತಿಂಗಳುಗಳಿಂದ ಗ್ರಾಹಕರು ತಮ್ಮ ಠೇವಣಿ ಹಣ ಕೇಳಲು ಸೊಸೈಟಿಗೆ ಹೋದರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಣ ಮರಳಿಸದೇ ತಮಗೆ ವಂಚನೆ ಮಾಡಲಾಗಿದೆ. ಹೀಗಾಗಿ ಅನೇಕ ಠೇವಣಿದಾರರು ವಂಚನೆಗೆ ಒಳಗಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ತೊಂದರೆ ಅನುಭವಿಸುತ್ತಿರುವ ಠೇವಣಿದಾರರ ಬದುಕು ಬೀದಿಗೆ ಬಿದ್ದಿದೆ. ಕೂಡಲೇ ಈ ಅಂತಾರಾಜ್ಯ ಸೊಸೈಟಿ ವಿರುದ್ಧ ಕೇಂದ್ರ ಹಾಗೂ ರಾಜ್ಯಸರ್ಕಾರ ಕ್ರಮ ಕೈಗೊಂಡು ಹಣ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು. ಠೇವಣಿದಾರರಾದ ಪ್ರಶಾಂತ ಪೇಟಿ, ಮಾರುತಿ ಪಾಟೀಲ, ನಾಮದೇವ ದಾಸರ, ಈರವ್ವಾ ಕಡಕೋಳ, ಮಾಲಾ ಪೇಟಿ, ಮಹಾದೇವ ತಿಗಳನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next