Advertisement

ನೀರು ಹಿತ-ಮಿತವಾಗಿ ಬಳಸಲು ಮನವಿ

09:16 PM Apr 26, 2021 | Team Udayavani |

ಯಾದಗಿರಿ : ಬಿರು ಬೇಸಿಗೆಯಲ್ಲಿ ಸಾರ್ವಜನಿಕರಿಗಾಗಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಜನರು ನೀರನ್ನು ಪೋಲು ಮಾಡದೆ ಹಿತ-ಮಿತವಾಗಿ ಬಳಸಬೇಕು ಎಂದು ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್‌ ಹೇಳಿದರು.

Advertisement

ನಗರದ ಗಾಂಧಿ  ವೃತ್ತದಲ್ಲಿ ಇತ್ತೀಚೆಗೆ ಇಲ್ಲಿನ ಬನ್ನಿಬಸವ ಸೇವಾ ಸಂಸ್ಥೆಯಿಂದ ನೀರಿನ ಅರವಟಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಅವಶ್ಯಕ ವ್ಯವಸ್ಥೆಯನ್ನು ಸಂಸ್ಥೆಯ ಯುವಕರು ಮಾಡಿದ್ದಾರೆ. ಬೇಸಿಗೆ ವೇಳೆ ಗ್ರಾಮೀಣ ಪ್ರದೇಶದಿಂದ ಆಗಮಿಸುವ ಜನರಿಗೆ ತಂಪಾದ ನೀರು ಒದಗಿಸುವುದು ಪುಣ್ಯದ ಕಾರ್ಯ ಎಂದರು. ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ್‌ ಮಾತನಾಡಿ, ಒಳ್ಳೆಯ ಕಾರ್ಯಗಳನ್ನು ನಾವೆಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಈ ಕಾರ್ಯ ಕೇವಲ ಬೇಸಿಗೆ 2 ತಿಂಗಳು ಅಲ್ಲದೆ ವರ್ಷಪೂರ್ತಿ ಬಳಕೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ಮುಖಂಡ ಬನದೇಶ ಎಕ್ಕಳ್ಳಿ, ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಇಂದುಧರ್‌ ಸಿನ್ನೂರ್‌, ಬನ್ನಿ ಬಸವ ಸಂಘದ ಅಧ್ಯಕ್ಷ ಜಗದೀಶ ಜಾಕಾ, ಅಂಬರೀಶ ಜಾಕಾ, ವೀರೇಶ್‌ ನಿಲುಗಿ, ರಾಜಶೇಖರ ಉಪ್ಪಿನ್‌, ಚೇತನ್‌ ಲದ್ದಿ, ವಿಶ್ವನಾಥ ಮದ್ದಿನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next