ಬೆಳ್ತಂಗಡಿ: ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಳೆಯಿಂದ ಹಾನಿಗೊಳಗಾದ ಚಾರ್ಮಾಡಿ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಶಾಸಕ ಹರೀಶ್ ಪೂಂಜ ಅವರು ತಾಲೂಕಿನ ಆಯ್ದ ಸುಮಾರು 22 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ.
ತಾಲೂಕು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು, ಅನೇಕ ಗ್ರಾಮಗಳು ಸರ್ವಋತು ರಸ್ತೆಯಿಂದ ವಂಚಿತವಾಗಿವೆ. ಬೆಳ್ತಂಗಡಿ ಲೋಕೋಪಯೋಗಿ ವಿಭಾಗ ಕೇವಲ 100 ಕಿ.ಮೀ.ನಷ್ಟು ಜಿಲ್ಲಾ ಮುಖ್ಯ ರಸ್ತೆಯನ್ನು ಹೊಂದಿದೆ. ತಾ| ವ್ಯಾಪ್ತಿಯ ಸುಮಾರು 22 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಆಭಿವೃದ್ಧಿಪಡಿಸಿದಲ್ಲಿ ಗ್ರಾಮೀಣ ಜನರು ತಾ| ಕೇಂದ್ರವನ್ನು ಸಂಪರ್ಕಿಸಲು ಸಹಾಯವಾಗಲಿದೆ ಎಂದು ಪೂಂಜ ಕೋರಿದ್ದಾರೆ.
ಮಾರುಕಟ್ಟೆಗೆ, ಶಾಲೆ-ಕಾಲೇಜುಗಳಿಗೆ, ವೈದ್ಯಕೀಯ ಅಗತ್ಯಗಳಿಗಾಗಿ ಜನರು ತಾ| ಕೇಂದ್ರಕ್ಕೆ ಬರಲು ಪರದಾಡಬೇಕಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಕಡೆಗಳಲ್ಲಿ ನೆರೆ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಿಥಿಲ,ಕೆಸರಿನಿಂದ ಜಾರುವ ರಸ್ತೆಗಳಿಂದ ಆತಂಕದಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾಲೂಕಿನ ಗ್ರಾಮೀಣ ರಸ್ತೆ ಅಭಿವೃದ್ಧಿ ಅವಶ್ಯ ಎಂದು ಸಚಿವರಿಗೆ ಮನವರಿಕೆ ಮಾಡಿದ್ದಾರೆ.
ತಾಲೂಕಿನ ಪುಯ್ಯ-ಉಳಿಯ- ಕಂಚಿನಡ್ಕ-ಮುರ (5 ಕಿ.ಮೀ.) ರಸ್ತೆ, ಗೋಳಿಯಂಗಡಿ – ಅಳದಂಗಡಿ- ಬೆಳ್ತಂಗಡಿ (30.20), ಸುಲ್ಕೇರಿ- ಕೊಕ್ರಾಡಿ – ಶಿರ್ತಾಡಿ (14), ಮುಂಡಾಜೆ- ಧರ್ಮಸ್ಥಳ (12), ಕೊಕ್ಕಡ- ಅರಸಿನಮಕ್ಕಿ – ಶಿಬಾಜೆ-ಉದನೆ (15), ಉಪ್ಪಿನಂಗಡಿ-ಅಜಿಲಮೊಗೇರು- ನಾವೂರ (14), ಲಾೖಲ- ಕೊಯ್ಯುರು- ಬೈಪಾಡಿ (14), ಉಜಿರೆ-ಇಂದಬೆಟ್ಟು (12), ಕಾಪಿನಡ್ಕ- ಪೆರ್ಮುಡ (9), ಅಳದಂಗಡಿ- ಸುಲ್ಕೇರಿಮೊಗ್ರು-ವಕ್ಕಳ-ಶಿರ್ಲಾಲು (5), ಪಡಂದಡ್ಕ- ಕಾಶಿಪಟ್ಣ- ಪೆರಾಡಿ- ಮರೋಡಿ-ನಾರಾವಿ (20), ರೆಖ್ಯ-ಉಪ್ಪಾರು (5), ಧರ್ಮಸ್ಥಳ- ಪಟ್ರಮೆ- ಗೋಳಿತೊಟ್ಟು (20), ವೇಣೂರು-ಮೂರ್ಜೆ (20), ಮಾಲಾಡಿ-ಗರ್ಡಾಡಿ (7), ಉಪ್ಪಿನಂಗಡಿ- ಅಂಡೆತ್ತಡ್ಕ- ಮುರ- ಮುಗೇರಡ್ಕ- ಬಂದಾರು ಜಂಕ್ಷನ್ (18), ಉಜಿರೆ-ಇಚ್ಚಿಲ- ಸುರ್ಯ- ನಡ-ನಾವೂರ(12), ಬೆಳ್ತಂಗಡಿ ಕೆ.ಇ.ಬಿ. ರಸ್ತೆ-ರೆಂಕೆದಗುತ್ತು-ಮಲ್ಲೊಟ್ಟು- ಗೇರುಕಟ್ಟೆ (5), ಪುಂಜಾಲಕಟ್ಟೆ-ಪುರಿಯ- ಕುಕ್ಕೇಡಿ (5), ನಿಡ್ಲೆ-ಕಾರ್ಯತ್ತಡ್ಕ-ಹತ್ಯಡ್ಕ ಸೇತುವೆ-ಶಿಶಿಲ ದೇವಸ್ಥಾನ-ಒಟ್ಲ ಗರೋಡಿ- ಶಿಬಾಜೆ (12), ನಾಳ- ಮಠ-ಬಳ್ಳಮಂಜ (ದೇವರ ಗುಂಡಿ)- ಮೊರಾರ್ಜಿ ದೇಸಾಯಿ- ಕುತ್ತಿನ-ಕುವೆಟ್ಟು ಶಾಲೆ (6), ಪರಪ್ಪು-ಬಟ್ಟೆಮಾರು-ರಕ್ತೇಶ್ವರಿ ಪದವು-ಮುಗೇರೋಡಿ-ಪದ್ಮುಂಜ (14 ಕಿ.ಮೀ.) ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಲಾಗಿದೆ.