Advertisement

ಗುಣಮಟ್ಟದ ಹಾಲು ಪೂರೈಸಲು ಮನವಿ

06:21 AM Jul 02, 2020 | Team Udayavani |

ಮುಳಬಾಗಿಲು: ಲಾಕ್‌ಡೌನ್‌ ವೇಳೆ ವ್ಯಾಪಾರ ಸ್ಥಗಿತಗೊಂಡರೂ ಕೋಚಿಮುಲ್‌ ರೈತರಿಂದ ಹಾಲು ಸ್ವೀಕಾರ ಮಾಡಿ, ಹಿತಕಾಯುತ್ತಿದೆ ಎಂದು ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್‌ ಮನವಿ ಮಾಡಿದರು. ಗೋಕುಲ್‌ ನಗರದಲ್ಲಿ  ಆರಂಭಿಸಿದ ಹಾಲು ಉತ್ಪಾದಕರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ನಗರ ವ್ಯಾಪ್ತಿಯಲ್ಲಿ ಈಗಾಗಲೇ ಎರಡು ಹಾಲು ಉತ್ಪಾದಕರ ಸಂಘಗಳು ರಚನೆಯಾಗಿವೆ. ಸೂಕ್ತ ನಿರ್ವಹಣೆ ಹಾಗೂ ಸಂಘದ ಸದಸ್ಯರಲ್ಲಿನ ಒಗ್ಗಟ್ಟಿನ  ಕೊರತೆಯಿಂದ ಮುಚ್ಚಲ್ಪಟ್ಟಿವೆ. ಸದ್ಯ ಹಾಲು ಉತ್ಪಾದಕರ ಸಂಘವು ಉತ್ತಮ ನಿರ್ವಹಣೆ ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಂಗನಾಥ್‌, ನಗರ ಜೆಡಿಎಸ್‌ ಘಟಕದ ಅಧ್ಯಕ್ಷ ತೇಜೋರಮಣ, ತಾಪಂ ಮಾಜಿ  ಅಧ್ಯಕ್ಷ ಎಂ.ಎಸ್‌.ಶ್ರೀನಿವಾಸರೆಡ್ಡಿ, ವಕೀಲ ಸಿ.ಎನ್‌.ರಾಜಕುಮಾರ್‌, ಪುರಸಭೆ ಮಾಜಿ ಸದಸ್ಯ ಶ್ರೀಧರ್‌, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ತುಳಸಿರಾಮಯ್ಯ, ನಾಗಮಂಗಲ ಶಂಕರಪ್ಪ, ಮಂದವುಲು ಮುನಿಯಪ್ಪ, ವೆಂಕಟಪ್ಪ, ಶಿಬಿರ ಕಚೇರಿ ಉಪ  ವ್ಯವಸ್ಥಾಪಕ ಶ್ರೀಧರ್‌ಮೂರ್ತಿ, ಕೃಷ್ಣಪ್ಪ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next