Advertisement

ರಾಷ್ಟ್ರಧ್ವಜಕ್ಕೆ ಅವಮಾನ ತಡೆಯುವಂತೆ ಮನವಿ

07:25 AM Aug 03, 2017 | |

ನಗರ: ಪ್ಲಾಸ್ಟಿಕ್‌ ರಾಷ್ಟ್ರಧ್ವಜದ ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಕ್ರಮ ಜರಗಿಸಿ, ರಾಷ್ಟ್ರಧ್ವಜದ ಗೌರವ ಕಾಪಾಡುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮ್ಯಾನೇಜರ್‌ ಮೂಲಕ ತಹಶೀಲ್ದಾರ್‌ಗೆ ಮನವಿ ನೀಡಲಾಯಿತು.

Advertisement

ಸ್ವಾತಂತ್ರೊéàತ್ಸವದಂದು ಎಲ್ಲ ಕಡೆ ಧ್ವಜವಂದನೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆದರೆ ಅದೇ ದಿನ ಮಧ್ಯಾಹ್ನದಿಂದಲೇ ಮಾರ್ಗ ಮತ್ತು ಚರಂಡಿಗಳಲ್ಲಿ  ಕಾಗದದ ಅಥವಾ ಪ್ಲಾಸ್ಟಿಕ್‌ನ ರಾಷ್ಟ್ರಧ್ವಜ ಛಿದ್ರವಾಗಿ ಬಿದ್ದಿರುತ್ತವೆ. 

ಅದಲ್ಲದೆ ಪ್ಲಾಸ್ಟಿಕ್‌ ತತ್‌ಕ್ಷಣ ನಾಶವಾಗದ ಕಾರಣ ಬಹಳ ದಿನಗಳ ತನಕ ರಾಷ್ಟ್ರಧ್ವಜದ ಅವಮಾನ ನಡೆಯುತ್ತಿರುವುದು ಕಾಣಸಿಗುತ್ತದೆ. ರಾಷ್ಟ್ರಧ್ವಜದ ಬಗ್ಗೆ ನಾವು ಗೌರವ ನಿರ್ಮಾಣ ಮಾಡುವುದೂ ಒಂದು ರೀತಿಯಲ್ಲಿ  ದೇಶಪ್ರೇಮವೇ ಆಗಿದೆ. ಆದ್ದರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ಹಿಂದೂ ಜನಜಾಗೃತಿ ಸಮಿತಿ ಕಳೆದ 15 ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನ ನಡೆಸುತ್ತಿದೆ. ರಸ್ತೆಬದಿ ಬಿದ್ದಿರುವ ರಾಷ್ಟ್ರಧ್ವಜಗಳನ್ನು ಸಂಗ್ರಹಿಸುವುದು, ಪ್ಲಾಸ್ಟಿಕ್‌ ಧ್ವಜದ ಬಳಕೆ ಮಾಡದಂತೆ ಸಮಾಜ ಮತ್ತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು, ಸರಕಾರಕ್ಕೆ ಈ ಬಗ್ಗೆ ಮನವಿ ಪತ್ರ ನೀಡುವುದು, ಕರಪತ್ರ ವಿತರಿಸುವುದು ಮುಂತಾದ ರೀತಿಯಲ್ಲಿ ಅಭಿಯಾನವನ್ನು ನಡೆಸುತ್ತಿದೆ. ಕೇಂದ್ರೀಯ ಗೃಹ ಮಂತ್ರಾಲಯದ ಆದೇಶದಂತೆ ರಾಷ್ಟ್ರಧ್ವಜ ಮತ್ತು ಬಿಲ್ಲೆಗಳಿಗಾಗಿ ಪ್ಲಾಸ್ಟಿಕ್‌ ಉಪಯೋಗಿಸಬಾರದು ಎಂಬ ನಿಯಮವಿದೆ.  ಈ ನಿರ್ಣಯವನ್ನು ಯೋಗ್ಯ ರೀತಿಯಲ್ಲಿ  ಕಾರ್ಯರೂಪಕ್ಕೆ ತರುವ ಆವಶ್ಯಕತೆಯಿದೆ ಎಂದು ಮನವಿಯಲ್ಲಿ ತಿಳಿಸಿದೆ.

ರಾಷ್ಟ್ರಧ್ವಜದ ಅವಮಾನವಾಗದಂತೆ ಸರಕಾರವು ತೆಗೆದುಕೊಂಡ ನಿರ್ಣಯವನ್ನು  ಕಾರ್ಯರೂಪಕ್ಕೆ  ತರುವುದಕ್ಕಾಗಿ ಪ್ಲಾಸ್ಟಿಕ್‌ನ ರಾಷ್ಟ್ರಧ್ವಜ, ಬಿಲ್ಲೆ  ಹಾಗೂ ಇತರ ವಸ್ತುಗಳ ಉತ್ಪಾದನೆ ಮಾಡುವ ಉತ್ಪಾದಕರು ಹಾಗೂ ವಿತರಕರು ಮತ್ತು ಮಾರಾಟಗಾರರ ವಿರುದ್ಧ  ಸೂಕ್ತ ಕ್ರಮ ಕೈಗೊಳ್ಳಬೇಕು. ಈ ರೀತಿಯ ವಸ್ತುಗಳನ್ನು ವಿತರಣೆ ಅಥವಾ ಮಾರಾಟಕ್ಕೆ$ಇಟ್ಟಲ್ಲಿ  ಅವರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದೆ.

Advertisement

ಮಾಧವ ರೈ ಕುಂಬ್ರ, ಪ್ರಶಾಂತ್‌, ಕೃಷ್ಣ ಕುಮಾರ್‌ ಶರ್ಮ, ಸಾಂತಪ್ಪ ಗೌಡ, ಚಂದ್ರಶೇಖರ್‌, ಪ್ರಶಾಂತ್‌ ಎನ್ಮಾಡಿ, ಧರ್ಣಪ್ಪ, ರಮೇಶ, ಇಂದಿರಾ, ಚೇತನಾ, ದಿವ್ಯಾ, ಕೇಶವ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next