Advertisement

ಯಕ್ಷಿಂತಿ ಗ್ರಾಮದ 200 ಮನೆ ಸ್ಥಳಾಂತರಿಸಲು ಮನವಿ

02:25 PM Aug 13, 2019 | Suhan S |

ಶಹಾಪುರ: ತಾಲೂಕಿನ ಯಕ್ಷಿಂತಿ ಗ್ರಾಮದ ಸುಮಾರು ಎರಡು ನೂರು ಮನೆಗಳ ಸ್ಥಿತಿ ಗಂಭೀರವಾಗಿದ್ದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Advertisement

ಪ್ರವಾಹ ಬಂದಾಗೊಮ್ಮೆ ಕೃಷ್ಣಾ ನದಿ ನೀರಿನಿಂದ ಇಲ್ಲಿನ ಜನರ ಸ್ಥಿತಿ ಅಧೋಗತಿಗೆ ತಲುಪುತ್ತದೆ. ಗ್ರಾಮಸ್ಥರ ಬದುಕು ತಹಬಂದಿಗೆ ಬರಲು ಕನಿಷ್ಠ ಐದಾರು ತಿಂಗಳು ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಜನರಿದ್ದಾರೆ. ಪ್ರಸ್ತುತ ಪ್ರವಾಹದಿಂದ ಯಕ್ಷಿಂತಿ ಗ್ರಾಮದ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಮನೆಗಳೆಲ್ಲ ಕೃಷ್ಣಾ ನೀರಿನಲ್ಲಿ ಮುಳುಗಿದ್ದು, ಗ್ರಾಮದಲ್ಲಿ ಜಾನುವಾರುಗಳು ಅನಾಥವಾಗಿ ತಿರುಗುತ್ತಿವೆ. ಕೆಲವೊಬ್ಬರು ಯಕ್ಷಿಂತಿ ಗ್ರಾಮಸ್ಥರನ್ನು ಹತ್ತಿಗೂಡೂರ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಜಾನುವಾರುಗಳು ಮಾತ್ರ ಗ್ರಾಮದಲ್ಲಿ ಅನಾಥವಾಗಿವೆ.

ಕೆಲವೊಬ್ಬರು ಜಾನುವಾರುಗಳನ್ನು ಗ್ರಾಮದಲ್ಲಿ ಬಿಟ್ಟು ಹೊಡೆದಿದ್ದು, ಇನ್ನೂ ಕೆಲವರು ಹಸು, ಎಮ್ಮೆಗಳನ್ನು ಟ್ರ್ಯಾಕ್ಟರ್‌ನಲ್ಲಿ ಹೊತ್ತೂಯ್ದಿದ್ದಾರೆ. ಕೆಲವು ಗ್ರಾಮದಲ್ಲಿ ಸಂಚರಿಸುತ್ತಿವೆ. ಪ್ರಾಣಿಗಳು ಸಮರ್ಪಕ ಆಹಾರವಿಲ್ಲದೆ ತಮ್ಮ ಮಾಲೀಕರು ಇಲ್ಲದೆ ನರಳುತ್ತಿವೆ. ಗ್ರಾಮದಲ್ಲಿ ಕನಿಷ್ಠ 50 ಹಸು ಕರುಗಳಿದ್ದ, ಅವುಗಳನ್ನು ತಾಲೂಕು ಆಡಳಿತ ರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸುಮಾರು 200 ಮನೆಗಳು ಜಲಾವೃತವಾಗಿದ್ದು, ಜನರು ಮನೆಗಳಿಗೆ ಕೀಲಿ ಹಾಕಿಕೊಂಡು ಗ್ರಾಮ ತೊರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next