ಶಿರಸಿ: ಕುಶಲ ಕರ್ಮಿಗಳಿಗೆ ಗೂಡಂಗಡಿ ಹಾಕಿಕೊಳ್ಳಲು ಸೂಕ್ತ ಸ್ಥಳ ನಿಗದಿಪಡಿಸಿ ಜೀವನ ನಡೆಸಲು ಅವಕಾಶ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ ನೇತೃತ್ವದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಧಾನಸಭಾಧ್ಯಕ್ಷರ ಕಾರ್ಯಲಯದಲ್ಲಿ ಸಭೆ ನಡೆಸಿ ಈ ಕುರಿತು ಚರ್ಚಿಸಿದರು. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಕುಶಲಕರ್ಮಿಗಳಿಗೆ ಈ ಹಿಂದಿನ ಸಮ್ಮಿಶ್ರ ಸರ್ಕಾರ ನೀಡಿತ್ತು ಆದರೆ ಈಗ ಅವರಿಗೆ ಅದನ್ನು ಇಟ್ಟುಕೊಳ್ಳಲು ಸೂಕ್ತ ಸ್ಥಳಾವಕಾಶ ದೊರಕದ ಹಿನ್ನೆಲೆಯಲ್ಲಿ ಮನೆ ಸೇರಿವೆ. ಆದ್ದರಿಂದ ಅವರಿಗೆ ನಗರಸಭೆ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ನಿಗದಿಪಡಿಸಿ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಎಸ್‌ಸಿ ಮೋರ್ಚಾ ಪ್ರಮುಖರು ತಮ್ಮ ಜನಾಂಗದ ಕುಂದು ಕೊರತೆ ಬಗ್ಗೆ ಹಾಗೂ ಅವುಗಳ ಪರಿಹಾರ ಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಶಿರಸಿ ಲಿಡ್ಕರ್ ಕಾಲೊನಿಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಶಿರಸಿಯಲ್ಲೇ ಅಧಿಕಾರಿಗಳ ಮಟ್ಟದ ಸಭೆ ಕರೆದು ಶೀಘ್ರ ಬಗೆಹರಿಸುವುದಾಗಿ ಕಾಗೇರಿ ಭರವಸೆ ನೀಡಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಎಸ್ಸಿ ಮೋರ್ಚಾ ವತಿಯಿಂದ ಸಭಾಧ್ಯಕ್ಷರಿಗೆ ಶಾಲು ಹೊದಿಸಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಅವರ ಸಮಗ್ರ ಬರಹಗಳ ಪುಸ್ತಕ ವನ್ನು ನೆನಪಿನ ಕಾಣಿಕೆಯನ್ನಾಗಿ ನೀಡಲಾಯಿತು. ರಾಜ್ಯ ಕಾರ್ಯಕಾರಿಣಿ ಸದಸ್ಯ ವಿನಾಯಕ ನಾಯ್ಕ, ಜಿಲ್ಲಾ ಪೇರೆಂಟಬೊಡಿಯ ಹರೀಶ್ ಪಾಲೇಕರ್, ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ವಸಂತ ನೇತ್ರಕರ್, ಶಿರಸಿ ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ಅರವಿಂದ್ ನೇತ್ರಕರ್, ಪ್ರಧಾನ ಕಾರ್ಯದರ್ಶಿ ಅನೂಪ್ ಪಾಲೇಕರ್, ಕೃಷ್ಣಾ ನೇತ್ರಕರ್, ಶಿರಸಿ ಎಸ್ಸಿ ಮೋರ್ಚಾ ಗ್ರಾಮೀಣದ ಪ್ರಧಾನ ಕಾರ್ಯದರ್ಶಿ ರಾಜೇಶ್ ನೇತ್ರಕರ್, ಉಪಾಧ್ಯಕ್ಷ ಸತೀಶ್ ಕಾನಡೆ, ಲೋಕೇಶ್ ಜೋಗಳೇಕರ್, ಶಿರಸಿ ನಗರ ಎಸ್ಸಿ ಮೋರ್ಚಾ ಪ್ರಮುಖರಾದ ಕುಮಾರ್ ಪಾವಸ್ಕರ್, ಮಹೇಂದ್ರ ಮುರ್ಡೆàಶ್ವರ ಇತರರು ಇದ್ದರು.