Advertisement

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭದ್ರತೆ ಒದಗಿಸಲು ಮನವಿ

06:21 PM Feb 12, 2021 | Team Udayavani |

ಸಿಂಧನೂರು: ಕೆಲ ಸಮಾಜಘಾತುಕ ಶಕ್ತಿಗಳು, ಸಂಬಂಧವೇ ಇಲ್ಲದ ವ್ಯಕ್ತಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ, ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟಿಸಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಯಾವುದೇ ಸರಕಾರದ ಅನುದಾನ ಪಡೆಯದೇ ಸರಕಾರದ ಭಾಗವಾಗಿಯೇ ಖಾಸಗಿ ಶಿಕ್ಷಣ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಇಂತಹ ಸಂಸ್ಥೆಗಳ ಆತ್ಮವಿಶ್ವಾಸವನ್ನು ಕುಂದಿಸುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗಿವೆ. ಸಂಬಂಧವೇ ಇಲ್ಲದ ಕೆಲವರು ಶಾಲೆ-ಕಾಲೇಜುಗಳಿಗೆ ಪ್ರವೇಶ ಮಾಡಿ ಮುಖ್ಯಸ್ಥರಿಗೆ, ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಪಾಲಕರ ವಿರುದ್ಧ ನಮ್ಮ ಹೋರಾಟವಲ್ಲ. ಪಾಲಕರು ಯಾವುದೇ ಸಂದರ್ಭದಲ್ಲಾದರೂ ಶಾಲೆಗಳಿಗೆ ಭೇಟಿ ನೀಡಬಹುದು.

ಖಾಸಗಿ ಶಾಲೆಗಳು ಸುಲಿಗೆ ಕೇಂದ್ರಗಳಾಗಿ ಬಿಂಬಿಸುತ್ತಿರುವುದು ಸರಿಯಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾ
ನಿರತರು ಒತ್ತಾಯಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಬಸವರಾಜ, ಸಿಂಧನೂರು ತಾಲೂಕಾಧ್ಯಕ್ಷ ವೈ.ನರೇಂದ್ರನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮುರಳೀಧರ, ಕೋಶಾಧ್ಯಕ್ಷ ಮಲ್ಲನಗೌಡ ಕಾನಿಹಾಳ, ಸಿಂಧನೂರು ತಾಲೂಕು ಪ್ರಧಾನ ಕಾರ್ಯದರ್ಶಿ ವೀರೇಶ ಅಗ್ನಿ, ಮಕ್ಕಳ ತಜ್ಞ ಡಾ| ಕೆ.ಶಿವರಾಜ, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸರಸ್ವತಿ ಪಾಟೀಲ್‌, ಗೌತಮ್‌ ಮೆಹ್ತಾ, ಆರ್‌.ಸಿ. ಪಾಟೀಲ್‌, ದಾಕ್ಷಯಣಿ ಬಸನಗೌಡ ಮಾ.ಪಾ. ಗೋಮರ್ಸಿ ಸೇರಿದಂತೆ ತಾಲೂಕಿನಿಂದ ಆಗಮಿಸಿದ್ದ ಖಾಸಗಿ ಶಾಲೆ ಆಡಳಿತ ಮಂಡಳಿ ಪದಾಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next