Advertisement

ಮೂಲ ಸೌಕರ್ಯ ಕಲ್ಪಿಸಲು ಮನವಿ

05:33 PM Sep 09, 2017 | |

ಶಹಾಪುರ: ನಗರದ ಸರಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಹಾಗೂ ನಿಗದಿತ ಸಮಯದಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲಿ ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ ತಾಲೂಕು ಘಟಕದಿಂದ ಶುಕ್ರವಾರ ಸರಕಾರಿ ಆಸ್ಪತ್ರೆ ಎದುರು ಧರಣಿ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಮಲ್ಲಯ್ಯ ಪೋಲಂಪಲ್ಲಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವ ವೈದ್ಯರು ಸಿಗುವುದಿಲ್ಲ. ಅಲ್ಲದೆ ಕುಡಿಯಲು ನೀರು ಸಹ ಸಿಗದೆ ಬರುವ ರೋಗಿಗಳು ಪರದಾಡುವಂತಾಗಿದೆ. ಯಾವುದೇ ಮೂಲ ಸೌಕರ್ಯವಿಲ್ಲದೆ ನೂರಾರು ಜನರು ನಿತ್ಯ ನರಕಯಾತನೆ
ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯರಿದ್ದು ಸಹ ಕರ್ತವ್ಯ ನಿಭಾಯಿಸುವುದಿಲ್ಲ. ಮಾಸಿಕ ಲಕ್ಷಗಟ್ಟಲೇ ಪಗಾರ ಮಾತ್ರಬೇಕು. ಆದರೆ ಕರ್ತವ್ಯ ಬೇಕಾಗಿಲ್ಲ. ಅಲ್ಲದೆ ಇಲ್ಲಿನ ವೈದ್ಯರು ವಾರಕ್ಕೊಬ್ಬರಂತೆ ಕರ್ತವ್ಯ ನಿಭಾಯಿಸುವ ವಾಗ್ಧಾನ ಮಾಡಿಕೊಂಡಿದ್ದಾರೆ. ಅದು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದು ಆರೋಪಿಸಿದರು.

ಎಸ್‌.ಎಂ. ಸಾಗರ ಮಾತನಾಡಿ, ಆಸ್ಪತ್ರೆಗೆ ದಾಖಲಾಗುವ ಒಳರೋಗಿಗಳಿಂದಲೂ ಹಣ ವಸೂಲಿ ನಡೆಯುತ್ತಿದೆ.
ಇದರಿಂದ ಬಡರೋಗಿಗಳು ಈ ಆಸ್ಪತ್ರೆ ಅವ್ಯವಸ್ಥೆಗೆ ಹಿಡಿ ಶಾಪ ಹಾಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ ಸಾಮಾನ್ಯ ಜನರಿಗೆ ಉತ್ತಮ ಸೇವೆ ಒದಗಿಸುವಂತೆ ಮಾಡಬೇಕು. ಇಲ್ಲವಾದಲ್ಲಿ
ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ ವೆಂಕಣಗೌಡ ಅವರಿಗೆ ಪ್ರತಿಭಟನಾ ನಿರತರಿಂದ ಮನವಿ ಪತ್ರ ಸಲ್ಲಿಸಲಾಯಿತು. ಮುಂಚಿತವಾಗಿ ಸಿ.ಬಿ.ಕಮಾನದಿಂದ ಆಸ್ಪತ್ರೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜೈಲಾಲ್‌ ತೋಟದಮನಿ, ದಾವಲಸಾಬ, ನಿಂಗಣ್ಣ ತಿಪ್ಪನಹಳ್ಳಿ,
ಹೊನ್ನಪ್ಪ ಮಾನ್ಪಡೆ, ಸಿದ್ದಯ್ಯ ಹಿರೇಮಠ, ಬಸವರಾಜ ಭಜಂತ್ರಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next