ದೇವದುರ್ಗ: ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರೆಕಾಲಿ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿ ಮಾಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಶ್ರೀನಿವಾಸ ಚಾಪಲ್ ಅವರಿಗೆ ಉಪನ್ಯಾಸಕರು ಮನವಿ ಸಲ್ಲಿಸಿದರು.
ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ ಅನುದಾನ ಬಿಡುಗಡೆ ಆಗಿದೆ. ಗೌರವಧನ ನೀಡಲು ಪ್ರಾಚಾರ್ಯ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉಪನ್ಯಾಸಕರಿಗೆ ಒಂದಿಲ್ಲೊಂದು ಸಮಸ್ಯೆ ಮಾಡುತ್ತಿರುವ ಹಿನ್ನೆಲೆ ಬಹುತೇಕ ಉಪನ್ಯಾಸಕರು ಬೇಸತ್ತಿದ್ದಾರೆ. ಕೋವಿಡ್ ಹಿನ್ನೆಲೆ ಅತಿಥಿ ಉಪನ್ಯಾಸಕರು ಕುಟುಂಬ ನಿರ್ವಹಣೆ ಮಾಡಲು ಹಲವು ಸಮಸ್ಯೆ ಎದುರಿಸಿದ್ದಾರೆ. ಅನುದಾನ ಬಿಡುಗಡೆ ಆಗಿದ್ದು, ಪೂರ್ಣ ಬಾಕಿ ವೇತನ ಪಾವತಿ ಮಾಡದೇ ಎರಡು ತಿಂಗಳ ಗೌರವಧನ ನೀಡಿದ್ದಾರೆ. ನಿತ್ಯ ಪ್ರಾಚಾರ್ಯ ಒಂದಿಲ್ಲೊಂದು ಸಮಸ್ಯೆ ಮಾಡುತ್ತಿರುವ ಹಿನ್ನೆಲೆ ಬಹುತೇಕ ಅತಿಥಿ ಉಪನ್ಯಾಸಕರು ಬೇಸರಕ್ಕೆ ಕಾರಣವಾಗಿದೆ. ಆರೇಳು ತಿಂಗಳ ಗೌರವಧನ ಬಾಕಿ ಇದ್ದು, ಎರಡು ತಿಂಗಳ ಗೌರವಧನ ನೀಡಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ಒಬ್ಬರಿಗೂ 86 ಸಾವಿರ ರೂ. ಗೌರವಧನ ಬರಬೇಕಿದೆ. ಗೌರವಧನ ವಿಳಂಬದಿಂದ ಬಹುತೇಕ ಉಪನ್ಯಾಸಕರು ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಪಡುವಂತಾಗಿದೆ. ಕೊಡಲೇ ಬಾಕಿ ಗೌರವಧನ ನೀಡದೇ ಇದ್ದಲ್ಲ ಪ್ರಾಚಾರ್ಯ ವಿರುದ್ಧ ಕಾನೂನು ವಿರುದ್ಧ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಹೊನ್ನಪ್ಪ, ಸಿದ್ದನಗೌಡ, ಪಂಪಪಾತಿ, ಫಾತಿಮ್, ವಿರುಪಾಕ್ಷಿ ಸೇರಿ ಇತರರು ಇದ್ದರು.