Advertisement

ಅತಿಥಿ ಉಪನ್ಯಾಸಕರ ಸಂಬಳ ನೀಡಲು ಆಗ್ರಹ

10:12 AM Jun 22, 2021 | Team Udayavani |

ಚಿಕ್ಕಮಗಳೂರು: ಐಟಿಐ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಕೋವಿಡ್‌ ಕಷ್ಟಕಾಲದಲ್ಲಿ ಅವರಿಗೆ ಸಲ್ಲಬೇಕಾದ ನ್ಯಾಯಯುತ ಕೋವಿಡ್‌ ಸಂಭಾವನೆ ನೀಡಬೇಕು ಮತ್ತು ಅವರನ್ನು ಕಾಯಂಗೊಳಿಸಬೇಕೆಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ನಂಜರಾಜ ಅರಸ್‌ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Advertisement

ಭಾನುವಾರ ಸರ್ಕಾರಿ ಐಟಿಐ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಫೇಸ್‌ಬುಕ್‌ ಆನ್‌ ಲೈನ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಸಂಯೋಜಕಿ ಎಂ. ಉಮಾದೇವಿ ಮಾತ ನಾಡಿ, ಈ ಸಂಘಟನೆಯೂ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಅತಿಥಿ ಉಪನ್ಯಾಸಕರು ಗಂಟೆಗೆ 100ರೂ.ನಂತೆ ದುಡಿಯುತ್ತಿದ್ದು, ಅವರಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಸಂಭಾವನೆ ಪಾವತಿಯಾಗುತ್ತಿಲ್ಲ ಎಂದರು.

ಅತಿಥಿ ಉಪನ್ಯಾಸಕರು ಡಿಪ್ಲಮೋ ಇಂಜಿನಿಯರಿಂಗ್‌, ಪಿಎಚ್‌ಡಿ ಪದವಿಧರರಾಗಿದ್ದು ಅತೀ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅವರಿಗೆ ಸೇವಾ ಭದ್ರತೆ ಮತ್ತು ಸಂಭಾವನೆಯನ್ನು ಹೆಚ್ಚು ಮಾಡಬೇಕೆಂದು ಆಗ್ರಹಿಸಿದರು.

ವಿ.ಎನ್‌. ರಾಜಶೇಖರ್‌ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ನೀಡುತ್ತಿಲ್ಲ ಬದಲಾಗಿ ಅವರನ್ನು ಜೀತದಾಳಿನಂತೆ ದುಡಿಸಿಕೊಳ್ಳಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಕನಿಷ್ಟ ಸಂಬಳವನ್ನು 18 ರಿಂದ 20 ಸಾವಿರಕ್ಕೆ ಏರಿಸಬೇಕು ಎಂದರು. ಸರ್ಕಾರಿ ಐಟಿಐ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಅಧ್ಯಕ್ಷೆ ನಾಗವೇಣಿ ಅತಿಥಿ ಉಪನ್ಯಾಸಕರಾದ ಅನಿತಾ, ಪದ್ಮಾಲತಾ, ಪ್ರಭು, ಸಾಧಿ ಕ್‌, ಅಮರೇಶ್‌, ರಾಕೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next