Advertisement

ಸಮರ್ಪಕ ವೇತನ ನೀಡಲು ಆಗ್ರಹ

02:41 PM Oct 05, 2019 | Suhan S |

ಬೈಲಹೊಂಗಲ: ಸಮರ್ಪಕ ವೇತನ ನೀಡುವಂತೆ ಆಗ್ರಹಿಸಿ ವಾಟರ್‌ಮನ್‌ಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಪುರಸಭೆಯಲ್ಲಿ ಗುತ್ತಿಗೆ ಆಧಾರ ಮೇಲೆ ವಾಟರ್‌ಮನ್‌ಗಳಾಗಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ನೀಡದೆ ಸತಾಯಿಸಲಾಗುತ್ತಿದೆ. ಇದರಿಂದ ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು ಆರೋಪಿಸಿದರು. ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ವಾಟರಮನಗಳಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಪದೇ, ಪದೇ ಮುಖ್ಯಾಧಿಕಾರಿಗಳು, ಅಭಿಯಂತರು ಕುಂಟು ನೆಪ ಹೇಳುತ್ತಾ 3 ತಿಂಗಳಿನಿಂದ ಸಂಬಳ ನೀಡಿಲ್ಲ. ಗುತ್ತಿಗೆದಾರರನ್ನು ವಿಚಾರಿಸಿದರೆ ಅಧಿಕಾರಿಗಳನ್ನು ಕೇಳಿರಿ ಎನ್ನುತ್ತಾರೆ. ಅಧಿಕಾರಿಗಳನ್ನು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.  ಕಾರ್ಮಿಕ ಮುಖಂಡ ಸುಭಾಸ ಕಾಜಗಾರ ಮಾತನಾಡಿ, ನಿಯಮಾನುಸಾರ ಪುರಸಭೆಯಿಂದ ನೀಡಬೇಕಾದ ವೇತನ ನೀಡದೆ ಸತಾಯಿಸಲಾಗುತ್ತಿದೆ. ಸಂಬಳವಿಲ್ಲದೆ ಒಂದೊತ್ತಿನ ಊಟಕ್ಕೂ ತೊಂದರೆಯಾಗಿದೆ. ಮೇಲಧಿ ಕಾರಿಗಳು ತುರ್ತು ಗಮನ ಹರಿಸಿ ವೇತನ ಕೊಡಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೋಮಪ್ಪ ಕಡಕೋಳ, ಯಲ್ಲಪ್ಪ ಸನದಿ, ವಿಠಲ ಚಳಕೊಪ್ಪ, ಮುಸ್ತಾಕ ಲಕನವಿ, ಶಮಶುದ್ದೀನ ದೇಶನೂರ, ಶೆಟ್ಟೆಪ್ಪ ಕೆಳಗೇರಿ, ರಾಘವೇಂದ್ರ ಕಬ್ಬಲಗಿ, ಅಣ್ಣಪ್ಪ ಗಾಣಿಗೇರ, ಮಹೇಶ ಭರಮನ್ನವರ, , ಸುನೀಲ ಮ್ಯಾಗೇರಿ, ಶಿವಾನಂದ ಅಕ್ಕಿ, ಅಜಯ ಪೂಜೇರಿ, ಶಿವಾನಂದ ಶಿರವಂತಿ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next