Advertisement

ಔಷಧ ಅಂಗಡಿ ತೆರೆಯಲು ಆಗ್ರಹ

02:41 PM May 06, 2020 | Team Udayavani |

ಬನಹಟ್ಟಿ: ರಬಕವಿ ಬನಹಟ್ಟಿ ನಗರದ ಪ್ರದೇಶದಲ್ಲಿಯ ಔಷಧ ಅಂಗಡಿಗಳನ್ನು ತೆರೆಯುವಂತೆ ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ಮದ್ಯದಂಗಡಿಗಳನ್ನು ಆರಂಭಿಸಿದ ಆಡಳಿತ, ಔಷಧ ಅಂಗಡಿಗಳನ್ನು ಬಂದ್‌ ಮಾಡಿ ರೋಗಿಗಳನ್ನು ಪರದಾಡುವಂತೆ ಮಾಡಿದೆ.

Advertisement

ಎರಡು ಮೂರು ದಿನಗಳಿಂದ ಜನರಿಗೆ ಔಷಧ ದೊರೆಯದೆ ಕಷ್ಟ ಪಡುತ್ತಿದ್ದಾರೆ. ಅದರಲ್ಲೂ ಬಡ ಜನರಿಗೆ ಅನುಕೂಲವಾಗುವ ಜನೌಷಧ ಕೇಂದ್ರ ಮುಚ್ಚಿರುವುದರಿಂದ 300 ರಿಂದ 400ರೂ. ಮೊತ್ತದ ಮಾತ್ರೆಗಳನ್ನು ಅಂದಾಜು ರೂ. 1 ಸಾವಿರ ಕೊಟ್ಟು ಖರೀದಿಸಬೇಕಾಗಿದೆ. ಮಹಾಲಿಂಗಪುರ ಮತ್ತು ಬೇರೆ ಪಟ್ಟಣಗಳಿಗೆ ಹೋಗಿ ಔಷಧ ತರಬೇಕಾಗಿದೆ.

ಔಷಧ  ಅಂಗಡಿಗಳನ್ನು ಬಂದ್‌ ಮಾಡಿರುವುದು ಸೂಕ್ತವಾದ ಕ್ರಮವಲ್ಲ ಎಂದು ಪುಟಾಣಿ ತಿಳಿಸಿದರು.ಈ ಸಂದರ್ಭದಲ್ಲಿ ಮತ್ತೋರ್ವ ಹಿರಿಯ ವಕೀಲ ವಿಜಯ ಹೂಗಾರ ಮಾತನಾಡಿ, ಔಷಧ ಅಂಡಿಗಳಿಗೂ ಕೆಲವು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿ ಅವರಿಗೂ ಸಮಯವನ್ನು ನೀಡಿ ಆರಂಭಿಸಬೇಕು. ದಿನಸಿ ಮತ್ತು ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಮನೆ ಮನೆಗೆ ತಲುಪಿಸುವಂತೆ ಔಷಗಳನ್ನು ಮನೆ ಮನೆಗೆ ತಲುಪಿಸಲು ಸಾಧ್ಯವಿಲ್ಲ. ತಾಲೂಕು ಆಡಳಿತ ಔಷಧ ಅಂಗಡಿಯ ಮಾಲೀಕರಿಗೆ ಒಂದು ನಿರ್ದಿಷ್ಟ ಸಮಯವನ್ನು ನೀಡಿ ಔಷ ಧಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೂಗಾರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next