Advertisement

ಗೋಮಾಳದ ಖಾತೆ ವಜಾಗೊಳಿಸದಂತೆ ಮನವಿ

03:08 PM Feb 21, 2020 | Suhan S |

ಕನಕಪುರ: ಹೈಕೋರ್ಟ್‌ ಆದೇಶ ಪಾಲಿಸಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವುದು ಅಸಂಬದ್ಧ ಎಂದು ಬಿಜೆಪಿ ನಗರ ಅಧ್ಯಕ್ಷ ನಾಗಾನಂದ್‌ ಕಾಂಗ್ರೆಸ್‌ ಕಾರ್ಯಕರ್ತರ ಪರೋಕ್ಷವಾಗಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕಸಬಾ ಹೋಬಳಿಯ ಬರಡನಹಳ್ಳಿ ಗ್ರಾಮದ ಸರ್ವೆ ನಂ.40ರಲ್ಲಿ ಬೈರೇಗೌಡ ಎಂಬುವರ ಕುಟುಂಬಕ್ಕೆ ಅಕ್ರಮವಾಗಿ 5 ಎಕರೆ ಜಮೀನು ನೀಡಲಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ತಹ ಶೀಲ್ದಾರ್‌ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೈಕೋರ್ಟ್‌ ಆದೇಶದಂತೆ ರೈತರಿಗೆ ನೀಡಿರುವ ಸರ್ಕಾರಿ ಗೋಮಾಳದ ಖಾತೆ ವಜಾಗೋಳಿಸಬಾರದು ಎಂದು ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಅವರು, ಬರಡನಹಳ್ಳಿ ಸರ್ವೆ ನಂ.40 ರಲ್ಲಿ ಸರ್ಕಾರಿ ಗೋಮಾಳದಲ್ಲಿ 1962 ರಿಂದ ಸಾಗುವಳಿ ಮಾಡುತ್ತಿದ್ದ ಬೈರೇ ಗೌಡ ಅವರನ್ನು ಹೊರತುಪಡಿಸಿ ಹಲವು ರೈತರಿಗೆ ಸಾಗುವಳಿ ಮಂಜೂರಾಗಿತ್ತು. ಸಾಗುವಳಿಯಿಂದ ವಂಚಿತರಾದ ಬೈರೆ ಗೌಡರ ಕುಟುಂಬ 2015 ರಲ್ಲಿ ಜಿಲ್ಲಾಧಿಕಾರಿಗಳಿಗೆ ಸಾಗುವಳಿ ನೀಡು ವಂತೆ ಮನವಿ ಸಲ್ಲಿಸಿತ್ತು. ಅಧಿಕಾರಿಗಳು ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ 2019 ರಲ್ಲಿ ಬೈರೇಗೌಡರ ಕುಟುಂಬ ಹೈಕೋರ್ಟ್‌ ಮೆಟ್ಟಿಲೇರಿದ್ದರು.  ಪ್ರಕರಣ ಪರಿಶೀಲಿಸಿದ ನ್ಯಾಯಾ ಲಯ ಭೈರೇಗೌಡ ಅವರ ಸೊಸೆ ಪಾರ್ವತಮ್ಮ ಅವರಿಗೆ ಸಾಗುವಳಿ ನೀಡುವಂತೆ ಅಧಿಕಾರಿಗಳಿಗೆ ಆದೇ ಶಿಸಿತ್ತು. ಅದರಂತೆ ತಹಶೀಲ್ದಾರ್‌ ಖಾತೆ ಮಾಡಿಕೊಟ್ಟಿದ್ದಾರೆ. ಆದರೆ ಕೆಲ ವರು ರಾಜಕೀಯ ದುರುದ್ದೇಶದಿಂದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಆಕ್ರಮ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಪ್ರತಿಭಟಿಸಿದ್ದಾರೆ ಎಂದರು.

ಈ ವೇಳೆ ಬಿಜೆಪಿ ಮುಖಂಡರಾದ ಬದ್ರಿ ಮೋಹನ್‌, ಕೋಟೆ ಮಂಜು, ಶೇಖರ್‌, ಭಗತ್‌ರಾಂ, ಶಿವಶಂಕರ್‌, ಗೋಪಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next