Advertisement

ಗಡಿ ಕನ್ನಡ ಭವನಕ್ಕೆ ಡಿವಿಜಿ ಹೆಸರಿಡಲು ಮನವಿ

04:56 PM Apr 22, 2019 | pallavi |

ಮುಳಬಾಗಿಲು: ನಗರದ ಡಿವಿಜಿ ರಂಗಮಂದಿರ ಕಟ್ಟಡವು ಈಗ ಗಡಿ ಕನ್ನಡ ಭವನವಾಗಿ ಪರಿವರ್ತನೆಯಾಗಿದೆ. ಅದಕ್ಕೆ ಡಿವಿಜಿ ಅವರ ಹೆಸರನ್ನೇ ನಾಮಕರಣ ಮಾಡಬೇಕು ಎಂದು ಕುರುಡುಮಲೆಯ ವಿದ್ಯಾರ್ಥಿ ಮುಖಂಡ ಅರವಿಂದ್‌ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 1887, ಮಾರ್ಚ್‌ 17 ರಂದು ಮುಳಬಾಗಿಲಿನಲ್ಲಿ ಜನಿಸಿದ ಡಿ.ವಿ.ಗುಂಡಪ್ಪ ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬಹುಮುಖ ಪ್ರತಿಭಾವಂತರಾಗಿ ಕನ್ನಡ ಪತ್ರಿಕೋದ್ಯಮ ಪಿತಾಮಹರಾಗಿದ್ದರು.

Advertisement

ಅಂತಹ ಕನ್ನಡ ಸಾರಸ್ವತ ಲೋಕದ ದಾರ್ಶನಿಕ ಮಂಕುತಿಮ್ಮನಿಗೆ ಡಾಕ್ಟರೆಟ್‌ನೊಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಸೇರಿದಂತೆ ನೂರಾರು ಪ್ರಶಸ್ತಿಗಳು ಒಲಿದಿವೆ. ಸಾರಸ್ವತ ಲೋಕದ ದಿಗ್ಗಜರಾದ ಡಿ.ವಿ.ಗುಂಡಪ್ಪ ಅವರ ನೆನಪಿಗಾಗಿ ಹಲವು ವರ್ಷಗಳ ಹಿಂದೆ ನಗರದಲ್ಲಿ ನಿರ್ಮಿಸಿದ್ದ ಡಿವಿಜಿ ರಂಗಮಂದಿರಕ್ಕಿದ್ದ ಹೆಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಮರೆಮಾಚುತ್ತಿದೆ. ಹೀಗಾಗಿ ಶೀಘ್ರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಗಡಿ ಕನ್ನಡ ಭವನಕ್ಕೆ ಡಿವಿಜಿ ರಂಗಮಂದಿರ ಎಂದು ನಾಮಕರಣ ಮಾಡಬೇಕೆಂದು  ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next