Advertisement

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹ

03:09 PM Mar 27, 2021 | Team Udayavani |

ಧಾರವಾಡ: ಸುವರ್ಣ ಕರ್ನಾಟಕ ಕಾರಿಡಾರ್‌ (ಬಿಎಂಐಸಿ) ಹೆಸರಿನಲ್ಲಿ ಕೆಐಎಡಿಬಿಯಿಂದಪ್ರಾರಂಭಿಸಿರುವ ತಾಲೂಕಿನ 14 ಹಳ್ಳಿಗಳ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿ ಭೂಮಿಉಳಿಸಿ ಹೋರಾಟ ಸಮಿತಿ ಹಾಗೂ ರೈತ ಕೃಷಿಕಾರ್ಮಿಕರ ಸಂಘಟನೆಯಿಂದ ನಗರದಲ್ಲಿಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿ ಡಿಸಿಹಾಗೂ ಕೆಐಎಡಿಬಿ ಅ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಭೂಮಿ ಉಳಿಸಿ ಹೋರಾಟ ಸಮಿತಿ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ,ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆತಾಲೂಕಿನ 14 ಗ್ರಾಮದ ರೈತರ ಭೂಮಿಯನ್ನುಸುವರ್ಣ ಕರ್ನಾಟಕ ಕಾರಿಡಾರ್‌ಸಲುವಾಗಿ ಸ್ವಾ ಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಅಂಗವಾಗಿ ರೈತರಿಗೆ ನೋಟಿಸ್‌ಬರುತ್ತಿದೆ. ಇದು ರೈತರಲ್ಲಿ ಆತಂಕ ಉಂಟುಮಾಡಿದೆ. ಅಭಿವೃದ್ಧಿ ನೆಪದಲ್ಲಿ ಭೂ ಸ್ವಾಧೀನ ಮಾಡಿಕೊಳ್ಳುವ ಮೂಲಕ ಅವರ ಬದುಕನ್ನೇ ಕಸಿದುಕೊಳ್ಳುವ ಹುನ್ನಾರ ಕೆಐಎಡಿಬಿ ಮೂಲಕ ನಡೆಯುತ್ತಿದೆ. ಈ ಹುನ್ನಾರವನ್ನುಸೋಲಿಸಲು ರೈತರು ಒಗ್ಗಟ್ಟಾಗಿ ಪ್ರಬಲಹೋರಾಟಕ್ಕೆ ಸಜ್ಜಾಗಬೇಕು ಎಂದರು.

ರೈತ ಕೃಷಿಕಾರ್ಮಿಕರ ಸಂಘಟನೆಯ ವಿ.ನಾಗಮ್ಮಾಳ ಮಾತನಾಡಿ, ಎಕಾಏಕಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದರಿಂದ ರೈತಕುಟುಂಬಗಳೆಲ್ಲವೂ ಬೀದಿಗೆ ಬರಬೇಕಾಗುತ್ತದೆ.ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿದರು.

ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಭೂಮಿ ಉಳಿಸಿಹೋರಾಟ ಸಮಿತಿ ಮುಖಂಡ ವಿಠuಲ ಪೀರಗಾರಮಾತನಾಡಿದರು. ಮನವಿ ಪತ್ರ ಸ್ವೀಕರಿಸಿ ಡಿಸಿ ನಿತೀಶ ಪಾಟೀಲ ಮಾತನಾಡಿ, ಇದರ ಬಗ್ಗೆ ತಮಗೆ ಮಾಹಿತಿ ಇಲ್ಲ. ಕೆಐಎಡಿಬಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ರೈತರೊಂದಿಗೆ ಸಭೆ ನಡೆಸಲಾಗುವುದು ಎಂದರು.

ಕೆಐಎಡಿಬಿ ಭೂಸ್ವಾಧೀನ ಅಧಿಕಾರಿಗಳ ಪರವಾಗಿ ಕಚೇರಿ ವ್ಯವಸ್ಥಾಪಕರು ಮನವಿ ಸ್ವೀಕರಿಸಿ ಮಾತನಾಡಿ,ಸರ್ಕಾರದ ನಿರ್ದೇಶನದಂತೆ ನೋಟಿಸ್‌ಜಾರಿ ಮಾಡಲಾಗಿದ್ದು, ಭೂ ಸ್ವಾಧೀನಕ್ಕೆ ರೈತರವಿರೋಧ ಇರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

Advertisement

ಆರ್‌ಕೆಎಸ್‌ ಜಿಲ್ಲಾ ಕಾರ್ಯದರ್ಶಿ ಶರಣುಗೋನವಾರ, ರಮೇಶ ಹೊಸಮನಿ, ಶಿವಾಜಿಸಾವಂತ, ಈಶ್ವರ, ಗೋವಿಂದ ಕೃಷ್ಣಪ್ಪನವರಸೇರಿದಂತೆ 14 ಗ್ರಾಮಗಳ ಭೂಮಿ ಉಳಿಸಿಹೋರಾಟ ಸಮಿತಿ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next