Advertisement

ಕುಂದುಕೊರತೆ ಸಭೆ ನಡೆಸಲು ಮನವಿ

12:23 PM Jan 25, 2020 | Team Udayavani |

ಬೆಳಗಾವಿ: ಕಳೆದ ನಾಲ್ಕು ವರ್ಷಗಳಿಂದ ಬೆಳಗಾವಿ ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ, ವರ್ಗದ ಕುಂದುಕೊರತೆಗಳ ಚರ್ಚೆ ಮತ್ತು ನಿವಾರಣೆ ಸಭೆಯನ್ನು ನಡೆಸುತ್ತಿಲ್ಲ. ಇದರಿಂದ ಪರಿಶಿಷ್ಟ ಜಾತಿ ಹಾಗೂ ವರ್ಗದವರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ ಎಂದು ಆರೋಪಿಸಿ ಎಸ್‌ಸಿ ಎಸ್‌ಪಿ-ಟಿಎಸ್‌ಪಿ ಜನಜಾಗೃತಿ ವೇದಿಕೆಯ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಎಸ್‌ಸಿ ಎಸ್‌ಪಿ/ಟಿಎಸ್‌ ಪಿ ಕಾಯ್ದೆ 2013-14ರಲ್ಲಿ ಜಾರಿಗೆ ಬಂದಿದೆ. ಈ ಕಾಯ್ದೆ ಪ್ರಕಾರ ಎಸ್‌ಸಿ/ಎಸ್‌ಟಿ ಕುಂದುಕೊರತೆಗಳಿಗೆ ಪರಿಹಾರ ಕಲ್ಪಿಸಲು ತಾಲೂಕು ಮಟ್ಟದಲ್ಲಿ ವರ್ಷಕ್ಕೆ ಕನಿಷ್ಠ 4 ಸಭೆಗಳನ್ನು ನಡೆಸಲೇಬೇಕು. ಆದರೆ ಕಳೆದ 6 ವರ್ಷಗಳಿಂದ ಇಂತಹ ಸಭೆ ನಡೆದಿಲ್ಲ. ಎಸ್‌ಸಿ ಹಾಗೂ ಎಸ್‌ಟಿ ಸಮಾಜದ ಮುಖಂಡರಿಗೆ ಕಾಯ್ದೆ ಪ್ರಕಾರ ತರಬೇತಿಯನ್ನೂ ನೀಡಲಾಗಿಲ್ಲ. ಮೇಲಾಗಿ ಪರಿಶಿಷ್ಟರ ಅಭಿವೃದ್ಧಿಗೆ ಸಂಬಂಧಿಸಿದ 33 ಇಲಾಖೆಗಳು ಹಾಗೂ ಗ್ರಾಮ ಪಂಚಾಯತ್‌ ಗಳಿಗೆ ನೀಡಲಾಗುತ್ತಿದ್ದ ಅನುದಾನವೂ ಸಮರ್ಪಕವಾಗಿ ಬರುತ್ತಿಲ್ಲ ಎಂದು ದೂರಿದರು.

ವೇದಿಕೆಯ ಮುಖಂಡರಾದ ಕಲ್ಲಪ್ಪ ರಾಮಚನ್ನವರ, ಸಂತೋಷ ಕಾಂಬಳೆ, ಮಲ್ಲೇಶ ಕೋರಂಗಿ, ಅಂಜಲಿ, ಮಹಾದೇವ ತಳವಾರ, ರವಿ ಬಸ್ತವಾಡಕರ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next