Advertisement
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್,ಕೇಂದ್ರ, ರಾಜ್ಯ ಸರ್ಕಾರ ಜಾರಿ ಮಾಡಿರುವ ಹಾಗೂಮಾಡಲು ಹೊರಟಿರುವ ತಿದ್ದುಪಡಿಗಳುರೈತರಿಗೆ ಮಾರಕವಾಗಿವೆ. ರೈತರಿಗಾಗಿ ನಡೆ ಯುತ್ತಿರುವ ಬಂದ್‌ಗೆ ವ್ಯಾಪಾರಸ್ಥರು ಮತ್ತು ಜನತೆ ಸಹಕರಿಸಿ ಎಂದ ಮನವಿ ಮಾಡಿದರು.
Related Articles
Advertisement
ಸರ್ಕಾರದ ವಿರುದ್ಧಒಗ್ಗಟ್ಟಿನ ಹೋರಾಟ :
ಮಾಗಡಿ: ಕೇಂದ್ರ ಸರ್ಕಾರಿ ಜಾರಿಗೆ ತರಲು ಹೋರಟಿರುವ ಕೃಷಿ ವಲಯದ ಮಸೂದೆಗಳನ್ನು ವಿರೋಧಿಸಿ ಸೆ.28 ರಂದು ನಡೆಯಲಿರುವ ಭಾರತ್ ಬಂದ್‌ಗೆ ರೈತಪರ ಹಾಗೂ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ. ಪಟ್ಟಣದ ಕಲ್ಯಾಗೇಟ್ ರೈತ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್ ಮಾತನಾಡಿ, ಭಾರತ್ ಬಂದ್‌ಗೆ ರಾಜ್ಯ ರೈತ ಸಂಘ, ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟ, ತಾಲೂಕು ರೈತ ಸಂಘ, ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಹಾಗೂ ರೈತ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ರೈತ ಮತ್ತು ಕಾರ್ಮಿಕ ವಿರೋಧಿ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ. ಇದರ ವಿರುದ್ಧ ಹೋರಾಟ ಮಾಡಲು ಎಲ್ಲರೂ ಸಂಘಟಿತರಾಗಿದ್ದೇವೆ. ರೈತ ಪರವಾದ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಬೆಂಬಲಕ್ಕೆ ಬರಬೇಕು. ಸೆ.28 ರಂದು ಬೆಳಗ್ಗೆಯಿಂದಲೇ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.
ಮಡಿವಾಳರ ಸಂಘ, ಸವಿತಾ ಸಮಾಜ, ರಕ್ಷಣ ವೇದಿಕೆ, ಜಯಕರ್ನಾಟಕ, ನವನಿರ್ಮಾಣ ವೇದಿಕೆ, ದಲಿತ ಸಂಘರ್ಷ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ಆಟೋ, ಬಸ್ ಮಾಲೀಕರ ಸಂಘ, ವಿಷ್ಣು ಸೇನೆ. ಮಾರುಕಟ್ಟೆ ವ್ಯಾಪಾರಿಗಳ ಸಂಘ ಬೆಂಬಲ ವ್ಯಕ್ತಪಡಿಸಿದ್ದು, ಖುದ್ದಾಗಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮಧುಗೌಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು