Advertisement

ಇಟಂಗಿಹಾಳ ಬಳಿ ಫುಡ್‌ಪಾರ್ಕ್‌ ನಿರ್ಮಾಣಕೆ r ಮನವಿ

05:22 PM Dec 27, 2020 | Suhan S |

ವಿಜಯಪುರ: ವಿಜಯಪುರ ಹೊರ ವಲದಯದ ಇಟ್ಟಂಗಿಹಾಳ ಹತ್ತಿರ ಫುಡ್‌ಪಾರ್ಕ್‌ ನಿರ್ಮಿಸಲು ಆಗ್ರಹಿಸಿ ವಿಜಯಪುರ ಜಿಲ್ಲೆಯ ರೈತರು-ಉದ್ಯಮಿಗಳ ನಿಯೋಗ ಶನಿವಾರ ಬೆಂಗಳೂರಿನಲ್ಲಿ ಕೃಷಿ ಸಚಿವಬಿ.ಸಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

Advertisement

ವಿಜಯಪುರ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಅದರಲ್ಲೂ ಲಿಂಬೆ, ದ್ರಾಕ್ಷಿ, ದಾಳಿಂಬೆ, ಮಾವು, ಬಾರೆ, ಪೇರಲ ಸೇರಿದಂತೆ ಉತ್ಕೃಷ್ಠ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ರೈತರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ, ಸಂಸ್ಕರಣೆ, ತಯಾರಿಕೆಗೆ ಸೌಲಭ್ಯಕಲ್ಪಿಸಿದರೆ ಜಿಲ್ಲೆಯ ರೈತರು ಆರ್ಥಿಕ ಅಭಿವೃದ್ಧಿಗೆಸಹಕಾರಿ ಆಗಲಿದ್ದು, ಸಣ್ಣ ಉದ್ಯಮಿಗಳು ಆರಂಭಕ್ಕೆ ಅವಕಾಶ ದೊರೆಯಲಿವೆ. ಈ ಕುರಿತು ಜಿಲ್ಲೆಯ ಶಾಸಕರಾದ ಮಾಜಿ ಸಚಿವ ಎಂ.ಬಿ. ಪಾಟೀಲ ಅವರುನವೆಂಬರ್‌ 30ರಂದೇ ಕೃಷಿ ಸಚಿವ ಬಿ.ಸಿ. ಪಾಟೀಲಅವರಿಗೆ ಪತ್ರ ಬರೆದುದನ್ನು ರೈತರ ನಿಯೋಗ ನೆನಪಿಸಿತು.

ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ಇಟ್ಟಂಗಿಹಾಳ ಗ್ರಾಮದ ಬಳಿ ಫುಡ್‌ಪಾರ್ಕ್‌ ನಿರ್ಮಿಸಲು 72 ಎಕರೆ ಜಮೀನು ಮೀಸಲಿರಿಸಲಾಗಿದೆ.ಇದೇ ಸ್ಥಳದಲ್ಲಿ ಫುಡ್‌ಪಾರ್ಕ್‌ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಅಲ್ಲದೇ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಕಷ್ಟುಅವಕಾಶಗಳು ದೊರೆಯುತ್ತದೆ ಎಂದು ಕೃಷಿ ಸಚಿವ ಪಾಟೀಲ ಅವರಿಗೆ ಮನವರಿಕೆ ಮಾಡಿಕೊಟ್ಟಿತು.

ಜಿಲ್ಲೆಯಲ್ಲಿ ಬಹುತೇಕ ಪ್ರದೇಶ ನೀರಾವರಿಗೆ ಒಳಪಟ್ಟಿರುವುದರಿಂದ ಮುಂದಿನ ವರ್ಷಗಳಲ್ಲಿಇನ್ನೂ ಹೆಚ್ಚಿನ ತೋಟಗಾರಿಕಾ ಪ್ರದೇಶಬೆಳವಣಿಗೆ ಆಗಲಿದೆ. ಈ ನಿಟ್ಟಿನಲ್ಲಿ ವಿಜಯಪುರಫುಡ್‌ಪಾರ್ಕ್‌ಗೆ ಕೃಷಿ ಸಚಿವರು ಹೆಚ್ಚು ಒತ್ತುನೀಡಬೇಕು ಎಂದು ಸವಿವರವಾಗಿ ತಿಳಿಸಲಾಯಿತು. ರೈತರ ನಿಯೋಗದ ಮನವಿಗೆ ಸ್ಪಂ ದಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ, ಶೀಘ್ರದಲ್ಲೇ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಫುಡ್‌ಪಾರ್ಕ್‌ ಸ್ಥಾಪನೆಗೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ| ಕೆ.ಎಸ್‌. ಮುಂಬಾರೆಡ್ಡಿ, ವಿಜಯಪುರ ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಬಿಎಲ್‌ಡಿಇ ನಿರ್ದೇಶಕ ಬಸನಗೌಡ ಪಾಟೀಲ, ಪ್ರಗತಿಪರ ರೈತರಾದ ದುಂಡಪ್ಪ ಬಡ್ರಿ, ಅಜೇಯ ಪಾಟೀಲ ಹನುಮಾಪುರ ನಿಯೋಗದಲ್ಲಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next