ಬನಹಟ್ಟಿ: ನ್ಯಾಯಬೆಲೆ ಅಂಗಡಿ ಹಾಗೂ ಸೇವಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ನಿವಾರಿಸಬೇಕು ಎಂದು ರಬಕವಿ-ಬನಹಟ್ಟಿ, ರಾಮಪುರ, ಹೊಸೂರ ನ್ಯಾಯಬೆಲೆ ಅಂಗಡಿಕಾರರು ಮತ್ತು ಸಾರ್ವಜನಿಕರು ರಬಕವಿ-ಬನಹಟ್ಟಿ ಗ್ರೇಡ್- 2 ತಹಶೀಲ್ದಾರ್ ಎಸ್.ಬಿ. ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.
ಸರ್ವರ್ ಇಲ್ಲದ ಪರಿಣಾಮ ಕೂಲಿಕಾರರಿಗೆ ಪಡಿತರ ಸಿಗುತ್ತಿಲ್ಲ. ಮತ್ತೂಂದೆಡೆ ಕೂಲಿಯೂ ಸಿಗದೇ ಪರದಾಡುವಂತಾಗಿದೆ. ಏತನ್ಮಧ್ಯೆ ಬೆಳಗ್ಗೆಯಿಂದ ಕಂಪ್ಯೂಟರ್ ಎದುರು ಕುಳಿತರು “ದಿಸ್ ಸೈಟ್ ಕಾಂಟ್ ಬೀ ರೀಚ್’ ಎಂದು ಪರದೆ ಮೇಲೆ ಕಾಣಿಸಿಕೊಳ್ಳುವ ಮೆಸೆಜ್ ಓದಿ ಓದಿ ಸುಸ್ತಾಗಿದೆ ಎನ್ನುತ್ತಾರೆ ಪಡಿತರ ವಿತರಕರು.
ಪಡಿತರ ಎಲ್ಲ ಸದಸ್ಯರ ಬೆರಳಚ್ಚು ಪಡೆಯುವುದಗೋಸ್ಕರ (ಕೆವೈಸಿ) ಪ್ರತ್ಯೇಕ ಸರ್ವರ್ ಲೈನ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಇಲಾಖೆ ಅದರಿಂದ ಯಾವುದೇ ಬೆಳವಣಿಗೆಗಳು ಕಾಣದೇ ಹಳೆಯ ಸರ್ವರ್ ಕೂಡ ಸರಿಯಾಗಿ ಬಾರದೇ ವಿತರಣೆಗೆ ತೊಂದರೆಯಾಗಿದೆ. ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಈ ರೀತಿಯ ಸಮಸ್ಯೆ ಇದ್ದರು ಕೂಡ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದೆಯಾದರೂ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ವರನ್ನು ನೀಡಿ. ಇಲ್ಲವಾದರೆ ಇದಕ್ಕೆ ಪರಿಹಾರ ವ್ಯವಸ್ಥೆ ದೊರಕಿಸಬೇಕೆಂದು ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿಕಾರರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಜಾನನ ನಾಗರಾಳ, ರಾಘು ತೇಲಿ, ಕಲ್ಲಪ್ಪ ವಾಗ್ಮೋರೆ, ಬಾಳಪ್ಪ ಸಿದ್ದಪ್ಪಗೋಳ, ಶೇಖರ ಸಜ್ಜನವರ, ಹನುಮಂತ ಕುಂದಗೋಳ, ಗುರು ಗೀರಿಸಗಾರ, ಆರೀಫ ಕೊಣ್ಣೂರ, ಪ್ರಕಾಶ ತೇರಣಿ, ಚಂದ್ರಶೇಖರ ಅಂಬಲಿ, ಎಸ್.ಎಸ್. ಬಿದರಿ, ದಾನಪ್ಪ ಆಸಂಗಿ, ಸಂತೋಷ ಕಂಚುಣಕಿ, ಸಂಜು ಮಾಲಾಪುರ, ಶ್ರೀಧರ ಹೂಗಾರ, ಭೀಮಶಿ ಮನವಡ್ಡರ, ವಿಜಯ ಜವಳಗಿ, ಭೀಮಸಿ ಮನವಡ್ಡೆರ ಇದ್ದರು.