ಮಡಿಕೇರಿ: ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಕಾಫಿ, ಟೀ ಮತ್ತು ರಬ್ಬರ್ ಪ್ಲಾಂಟೇಷನ್ ಕೈಗಾರಿಕೆಯಲ್ಲಿನ ನೌಕರರಿಗೆ 58 ರಿಂದ 60 ವರ್ಷಗಳ ಸೇವಾ ಅವಧಿಗೆ ವಿಸ್ತರಿಸಲು ದಿ ಎಸ್ಟೇಟ್ಸ್ ಸ್ಟಾಫ್ ಯೂನಿಯನ್ ಆಫ್ ಸೌತ್ ಇಂಡಿಯಾ (ಐಎನ್‌ಟಿಯುಸಿ) ಸಂಘಟನೆಯು ಒತ್ತಾಯಿಸಿದೆ.
ಕೇರಳ ರಾಜ್ಯದ ವಯನಾಡು ಜಿಲ್ಲೆ ಮಹಾನಂದವಾಡಿಯಲ್ಲಿ ನಡೆದ ಸಂಘದ 47ನೇ ಸರ್ವಸದಸ್ಯರ ಸಭೆಯಲ್ಲಿ ಈ ಒತ್ತಾಯದ ಸಂಬಂಧ ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀ ಕರಿಸಿತೆಂದು ಸಂಘದ ಪ್ರಧಾನ ಕಾರ್ಯ ದರ್ಶಿ ಎಂ.ಸಿ ಶಿವಾನಂದಸ್ವಾಮಿ ತಿಳಿಸಿದ್ದಾರೆ.
ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಪಿ.ಆರ್.ಥೋಮಸ್ ಅವರು, ದಕ್ಷಿಣ ಭಾರತದಲ್ಲಿ ಟ್ರೇಡ್ ಯೂನಿಯನ್ ಆ್ಯಕ್ಟ್ ಅಡಿಯಲ್ಲಿ 1947ರಲ್ಲಿ ನೊಂದಣಿಗೊಂಡ ಮೊದಲ ಸಂಘಟನೆಯು ಈ ಸ್ಟಾಫ್Õ ಯೂನಿಯನ್ ಆಗಿರುತ್ತದೆ ಎಂದರು. ಪ್ಲಾಂಟೇಷನ್ ಸಿಬಂದಿ ವೇತನ ಹಾಗೂ ಇತ್ಯಾದಿ ಸೌಲಭ್ಯಗಳಿಗಾಗಿ ಮಾಲಕರ ಸಂಘಟನೆಯಾದ ಯುನೈಟೆಡ್ ಪ್ಲಾಂಟರ್ ಅಸೋಸಿಯೇಷನ್ ಆಪ್ ಸದರನ್ ಇಂಡಿಯಾ ಇದರೊಂದಿಗೆ ಇದುವರೆಗೂ 22 ಕೈಗಾರಿಕಾವಾರು ಒಪ್ಪಂದಗಳನ್ನು ಮಾಡುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ತಿಳಿಸಿದರು.
ಕರ್ನಾಟಕದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಕಾಫಿ, ಟೀ ತೋಟಗಳಾದ ಟಾಟಾ ಕಾಫಿ, ಬಾಂಬೆ ಬರ್ಮಾ ಟ್ರೇಡಿಂಗ್ ಕಾರ್ಪೊàರೇಷನ್, ಬಾಳನೂರು ಟೀ ಮುಂತಾದ ಹಲವು ತೋಟಗಳಿಂದ ನೂರಾರು ಸಿಬಂದಿ ಕೇರಳ ಹಾಗೂ ತಮಿಳುನಾಡಿನ ಬಹು ಸಂಖ್ಯೆಯಲ್ಲಿ ಸೇರಿದ್ದ ಸಭೆಯಲ್ಲಿ, ಮುಂದಿನ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಪಿ.ಎಸ್ ರೆಬೆಲೊ, ಕಾರ್ಯಧ್ಯಕ್ಷ ಪಿ.ಆರ್ ಥೋಮಸ್, ಉಪಾಧ್ಯಕ್ಷರುಗಳಾಗಿ, ಹೆಚ್ ಸುಧಾಕರ ಶೆಟ್ಟಿ(ಕರ್ನಾಟಕ), ಪಿ.ಜೆ ಸಜಿ (ಕೇರಳ), ಹರ್ಬರ್ಟ್ (ತಮಿಳುನಾಡು) ಪ್ರಧಾನ ಕಾರ್ಯದರ್ಶಿ ಎಂ.ಸಿ ಶಿವಾನಂದಸ್ವಾಮಿ ಖಜಾಂಚಿಯಾಗಿ ಶ್ರೀಮತಿ ಫೆಮೇಲಾ ಮೋಸಸ್ ಆಯ್ಕೆಯಾದರು.