ಔರಾದ: ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಿರುವ ಜಿಲ್ಲಾಡಳಿದ ನಿರ್ಧಾರ ಖಂಡಿಸಿ ಕರ್ನಾಟಕ ರೈತ ಸಂಘದಿಂದ ನ.30ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ್ ತಿಳಿಸಿದ್ದಾರೆ.
ಈ ಕುರಿತು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಔರಾದ ಹಾಗೂ ಕಮಲನಗರ ತಾಲೂಕಿನಲ್ಲಿ ಮಳೆ
ಪ್ರಮಾಣ ಮೂರು ವರ್ಷಗಳಿಂದ ತೀರಾ ಕಡಿಮೆಯಾಗಿದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಜನ-ಜಾನುವಾರುಗಳಿಗೂ ಕುಡಿಯುವ ನೀರು ಸಿಗದ ಸ್ಥಿತಿ ಬಂದಿದೆ. ಹೀಗಾಗಿ ಜಿಲ್ಲಾಡಳಿತ ಕೂಡಲೆ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾರಂಜಾ ಜಲಾಶಯದಿಂದ ಭಾಲ್ಕಿ ತಾಲೂಕಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಔರಾದ ತಾಲೂಕಿಗೆ ಮಾತ್ರ ನೀರು ಬಿಡಡುತ್ತಿಲ್ಲ. ಜಿಲ್ಲಾ ಧಿಕಾರಿಗಳು ಔರಾದ ಭಾಲ್ಕಿ ತಾಲೂಕಿನ ನಡುವೆ ತಾರತಮ್ಯ ಮಾಡದೇ ಎರಡೂ ತಾಲೂಕಿನಲ್ಲಿ ಜನ-ಜಾನುವಾರುಗಳಿ ಇವೆ ಎಂಬುದನ್ನು ಅರಿತು ಮಾನವೀಯತೆ ಆಧಾರದಕ್ಕು ನೀರು ಬಿಡಬೇಕೆಂದು ತಿಳಿಸಿದ್ದಾರೆ.
ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೆ ತಾಲೂಕಿಗೆ ನೀರು ಬಿಡಲು ಮುಂದಾಗಬೇಕು. ಇಲ್ಲವಾದಲ್ಲಿ ರೈತರ ಜೀವಕ್ಕೆ ಆಧಾರವಾದ ಜಾನುವಾರುಗಳನ್ನು ಸಬಂಧಿಕರ ಮನೆಗೆ ಕಳುಹಿಸುವ ಅಥವಾ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿರ್ವಾತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಾರ್ಯದರ್ಶಿ ಪ್ರಕಾಶ ಬಾವಗೆ, ವಿಶ್ವನಾಥ ಕೌಠಾ, ಮಲ್ಲಯ್ನಾ ಸ್ವಾಮಿ ಬಾಬಳಿ, ಬಾಬಶೆಟ್ಟಿ ಪಾಟೀಲ, ರಮೇಶ ಬೋರ್ಗೆ, ಬಸವರಾಜ ಪಾಟೀಲ ನಿರಂಜಪ್ಪಾ ನಮೋಸಿ, ಕಾರ್ತಿಕ ಸ್ವಾಮಿ, ರೇವಣಯ್ನಾ ಸ್ವಾಮಿ, ಅಣೆಪ್ಪಾ ಶೇಟಕಾರ ಇನ್ನಿತರರು ಇದ್ದರು.