Advertisement

ತಪ್ಪು ಸರಿಪಡಿಸಲು ಆಗ್ರಹ: ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ

01:08 PM Aug 05, 2017 | Team Udayavani |

ಚಿತ್ತಾಪುರ: ತಾಲೂಕಿನ ಹಲಕರ್ಟಿ ಗ್ರಾಮದ ಜಮೀನುಗಳ ಪಹಣಿಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಹಲಕರ್ಟಿ ಗ್ರಾಮದ ರೈತರು ಹಾಗೂ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಮತ್ತು ರೈತ ಕೃಷಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಎತ್ತಿನ ಬಂಡಿ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್‌.ಬಿ. ದಿವಾಕರ, ಎಸ್‌ಯುಸಿಐ ಕಾರ್ಯದರ್ಶಿ ಆರ್‌.ಕೆ. ವೀರಭದ್ರಪ್ಪ, ಆರ್‌ಕೆಎಸ್‌ ಸಂಘಟನೆ ಮುಖಂಡ ರಾಘವೇಂದ್ರ ಅಲ್ಲಿಪೂರಕರ್‌ ನೇತೃತ್ವದಲ್ಲಿ ಹಲಕರ್ಟಿ ಗ್ರಾಮದಿಂದ ಪಟ್ಟಣದ ತಹಶೀಲ್‌ ಕಚೇರಿಗೆ ಆಗಮಿಸಿದ
ರೈತರು, ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಕೆಲಸದಿಂದ ಹಲಕರ್ಟಿ ಗ್ರಾಮದ ಜಮೀನುಗಳ ರೈತರ ಪಹಣಿಗಳಲ್ಲಿ ದೋಷ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಒಂದೇ ಸರ್ವೇ ಸಂಖ್ಯೆಯನ್ನು ಎರಡು ಪಹಣಿಗೆ ನೀಡಲಾಗಿದೆ. ಇದರಿಂದಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹಲವರ ಪಹಣಿಗಳಿಗೆ ಒಂದೇ ಸರ್ವೇ ಸಂಖ್ಯೆಯಿದೆ. ಪಹಣಿ ಪತ್ರಕ್ಕೂ ಹೋಲ್ಡಿಂಗ್‌ ಹಾಗೂ ನಕಾಶೆಗಳಿಗೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಇಲ್ಲಿನ ಗ್ರಾಮ ಪಾಲಕ ಗ್ರಾಮಕ್ಕೆ ಸರಿಯಾಗಿ ಬರದೇ ರೈತರ ಸಮಸ್ಯೆಗಳಿಗೆ ಸ ಂದಿಸುತ್ತಿಲ್ಲ. ಆದ್ದರಿಂದ ಖರೀದಿ ಮಾಡಿದ ರೈತರು ಹಾಗೂ ಮಾರಾಟ ಮಾಡಿದ ರೈತರು ಐದಾರು ವರ್ಷಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಹಿತದೃಷ್ಟಿಯಿಂದ ಕೂಡಲೇ ಪಹಣಿಯಲ್ಲಾದ ದೋಷ ಸರಿಪಡಿಸಬೇಕೆಂದು ಒತ್ತಾಯಿಸಿದರು. ಹಲಕರ್ಟಿ ಗ್ರಾಮದ ಜಮೀನುಗಳನ್ನು ಪುನರ್‌ ಸರ್ವೇ ಮಾಡಿ ಕಬೆj ಇದ್ದವರಿಗೆ ಜಮೀನುಗಳ ಕಾಗದ ಪತ್ರ ನೀಡಬೇಕು. ಗ್ರಾಮಕ್ಕೆ ಆಗಮಿಸದ ಗ್ರಾಮಲೇಖಪಾಲಕನನ್ನು ವರ್ಗಾವಣೆ ಮಾಡಬೇಕು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

55 ಎತ್ತಿನ ಬಂಡಿಗಳಲ್ಲಿ ರೈತರು ಆಗಮಿಸಿ ಪ್ರದರ್ಶನ ಮಾಡಿ ಪ್ರತಿಭಟಿಸಿದರು. ಗ್ರೇಡ್‌-2 ತಹಶೀಲ್ದಾರ್‌ ರವೀಂದ್ರ ದಾಮಾ ಮನವಿ ಪತ್ರ ಸ್ವೀಕರಿಸಿದರು. ರೈತರಾದ ಯುಶವಂತರಾಯ ಕೊಟಗಿ, ಕಾಂತಪ್ಪ ನಾಲಡಗಿ, ಕಾಂತು ಮೇಲಿನಮನಿ, ನಿಂಗಣ್ಣ ಈರಗೊಂಡ, ಶರಣಪ್ಪ ಮದರಿ ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next