Advertisement

ಅಪರೂಪದ ಕಾಯಿಲೆ: ಬಾಲಕಿಯ ಚಿಕಿತ್ಸೆಗೆ ಸಹಕರಿಸಲು ಮನವಿ

11:45 AM Jul 17, 2018 | Team Udayavani |

ಪುಣೆ: ಫ್ಯಾನ್ಕೋನಿ ಎನೀಮೀಯಾ ಎಂಬ ಅಪರೂಪದ ಕಾಯಿಲೆಯಿಂದಾಗಿ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ಸಹಕರಿಸುವಂತೆ ಕೋರಲಾಗಿದೆ. ಪುಣೆಯಲ್ಲಿ ಹೊಟೇಲ್‌ ಉದ್ಯೋಗಿಯಾಗಿರುವ ಕುಂದಾಪುರ ಹಾಲಾಡಿ ಗ್ರಾಮದ ಕುಚ್ಚಾಳ್‌  ನಿವಾಸಿಯಾಗಿರುವ ರತ್ನಾಕರ ಶೆಟ್ಟಿ ಅವರ ಪುತ್ರಿ ಚೈತ್ರಾ ಶೆಟ್ಟಿ (18) ಅವರು ಫ್ಯಾನ್ಕೋನಿ ಎನೀಮೀಯಾ ಖಾಯಿಲೆಯಿಂದ ಬಳಲುತ್ತಿರುವ ದುರ್ದೈವಿಯಾಗಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಯದ ಹೆಲ್ತ ಸಿಟಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿರುವ ರತ್ನಾಕರ ಶೆಟ್ಟಿ ಈಗಾಗಲೇ ಪುತ್ರಿಯ ಚಿಕಿಕ್ಸೆಗಾಗಿ ಲಕ್ಷಾಂತರ ರೂ. ಗಳನ್ನು ವ್ಯಯಿಸಿದ್ದಾರೆ. ಎರಡು ವರ್ಷದ ಮಗುವಾಗಿದ್ದಾಗಲೇ ರೋಗದ ಲಕ್ಷಣ ಕಂಡುಬಂದಿದ್ದು, ಹೊಟೇಲ್‌ ಉದ್ಯೋಗಿಯಾಗಿರುವ ರತ್ನಾಕರ ಶೆಟ್ಟಿ ಮತ್ತು ದಿನಕೂಲಿ ಕೆಲಸ ಮಾಡುವ ಅವರ ಪತ್ನಿ ಚಂದ್ರಾವತಿ ಶೆಟ್ಟಿ ಅವರು ಪುತ್ರಿಯ ಚಿಕಿತ್ರೆಗೆ ಹಣವಿಲ್ಲದೆ ದಿಕ್ಕು ತೋಚದಂತಾಗಿದ್ದಾರೆ. ಕಳೆದ  16 ವರ್ಷಗಳಿಂದ ಮಗಳ ಚಿಕಿತ್ಸೆಗೋಸ್ಕರ ಜೀವನವನ್ನೇ ಮುಡಿಪಾಗಿರಿಸಿದ್ದಾರೆ.

ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ನಾರಾಯಣ ಹೃದಯಾಲಯದ ಹೆಲ್ತ… ಸಿಟಿ ಆಸ್ಪತ್ರೆಯ ಡಾ| ಸುನಿಲ್‌ ಭಟ್‌ ಅವರು, ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲೆಂಟ್‌ಗೆ ಸೂಚಿಸಿದ್ದು,  27 ಲಕ್ಷ ರೂ. ವೆಚ್ಚ ತಗಲಬಹುದು ಎಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು  ಹೊತ್ತಿನ ಊಟಕ್ಕೂ ಪರದಾಡುತ್ತಿರುವ ದಂಪತಿಯು ಇಷ್ಟೊಂದು ಮೊತ್ತದ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ಏಕೈಕ ಪುತ್ರಿಯನ್ನು ಉಳಿಸಿಕೊಳ್ಳಲು ಸಹೃದಯ ದಾನಿಗಳಿಂದ ಸಹಾಯ ಸಹಕಾರವನ್ನು ಕೋರಿದ್ದಾರೆ. ಸಹಕಾರ ನಿಡಬಯಸುವವರು ವಿಜಯ ಬ್ಯಾಂಕ್‌, ಹಾಲಾಡಿ ಶಾಖೆ, 

ಖಾತೆ ಸಂಖ್ಯೆ 107301010009079, IFSC CODE VIJB 0001073 ಇಲ್ಲಿಗೆ ಜಮಾವಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಚೈತ್ರಾ ಅರ್‌. ಶೆಟ್ಟಿ, D/O ರತ್ನಾಕರ ಶೆಟ್ಟಿ, ಕುಚ್ಚಾಳ್‌, ಅಂಚೆ ಹಾಲಾಡಿ 76, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಅಥವಾ 8861934198 ಈ ನಂಬರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next